ಬೆಂಗಳೂರು : ಸಂಜೆ ದುಡ್ಡು ಕೊಡದಿದ್ರೆ ಹೆಂಡ್ತಿ ಜೊತೆ ಗಂಡ ಗಲಾಟೆ ಮಾಡ್ತಿರೋದನ್ನು ನಾವು ನೋಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಕೊಡುವ ದುಡ್ಡು ಮನೆಗೆ ತೆಗೆದುಕೊಂಡು ಹೋದ್ರೆ ಸಮಸ್ಯೆ ಇಲ್ಲ. ಬೆಳಗ್ಗೆ ಎದ್ದ ತಕ್ಷಣ ಬಾರ್ ಓಪನ್ ಆಗ್ತಿವೆ. ಗಂಡ-ಹೆಂಡ್ತಿ ಮಧ್ಯೆ ಗಲಾಟೆ ಆಗ್ತಿದೆ ಎಂದು ಕೌಂಟರ್ ಕೊಟ್ಟರು.
ನೀವು ಹಸಿವು ಮುಕ್ತ ಮಾಡ್ತೀವಿ ಎಂದು ಹೇಳಿದ್ರಿ. ಉಚಿತ ಗ್ಯಾರಂಟಿ ಕಾರ್ಡ್‌ಗಳಿಗೆ ಸಹಿ ಹಾಕಿ ಕೊಟ್ಟಿದೀರಿ. ಎಲ್ಲರಿಗೂ ಉಚಿತ, ಖಚಿತ, ನಿಶ್ಚಿತ ಅಂದ್ರಿ. ಆದರೆ, ಮಂತ್ರಿಯೊಬ್ಬರು ದಾರಿಯಲ್ಲಿ ಹೋಗೋರಿಗೆಲ್ಲ ಕೊಡೋಕ್ಕಾಗುತ್ತಾ ಅಂದ್ರು ಎನ್ನುವ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಪಂಚ್ ಕೊಟ್ಟರು.
ಇದನ್ನೂ ಓದಿ : ಎಣ್ಣೆ, 1 ಬಾಟೆಲ್ ನೀರು, 10 ರೂ.ಗೆ ಶೇಂಗಾ ತಗೊಂಡು, ಓಡಾಡ್ತಾ ಕುಡೀತಾರೆ : ಸಚಿವ ತಿಮ್ಮಾಪುರ್
ಅಕ್ಕಿಯನ್ನು ಅಲ್ಲಿಯೇ ಮಾರುತ್ತಿದ್ದಾರೆ
ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಕೊಡ್ತೀವಿ ಅಂದಿದ್ರಿ. ಈಗ ಸರಾಸರಿ ಲೆಕ್ಕ ತಗೋತಿದ್ದೀರಿ. ಸರ್ಕಾರಕ್ಕೆ ಸೌಮ್ಯವಾಗಿಯೇ ಕುಮಾರಸ್ವಾಮಿ ತರಾಟೆ ತೆಗೆದುಕೊಂಡರು. ಪ್ರಸಾದ್ ಅಬ್ಬಯ್ಯ ಮಧ್ಯಪ್ರವೇಶ ಮಾಡಿ, 10 ಕಿಲೋ ಅಕ್ಕಿ ಜನ ತೆಗೆದುಕೊಂಡು ಹೋಗ್ತಿಲ್ಲ. ಕೆಲವರು ಅಕ್ಕಿಯನ್ನು ಅಲ್ಲಿಯೇ ಮಾರುತ್ತಿದ್ದಾರೆ ಎಂದರು.
2,000 ಆಗಸ್ಟ್ ವರೆಗೂ ಆಗಲ್ಲ
ಆಗ ಕುಮಾರಸ್ವಾಮಿ, ನೀವು ಹಣ ಕೊಡುವುದಕಿಂತಲೂ ಬೇರೆ ಅಗತ್ಯ ಆಹಾರ ವಸ್ತುಗಳನ್ನು ಕೊಡಿ ಎಂದರು. ಬಸವರಾಜ ರಾಯರೆಡ್ಡಿ ಮಧ್ಯಪ್ರವೇಶಿಸಿ, ಗೃಹಲಕ್ಷ್ಮೀ ಇಂದ ಎರಡು ಸಾವಿರ ಕೊಡ್ತೀವಿ. ಅದರಿಂದ ಬೆಳೆ, ಅಡುಗೆ ಎಣ್ಣೆ, ಗ್ಯಾಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಅದಕ್ಕೆ ಕುಮಾರಸ್ವಾಮಿ ಅವರು, ಅದು ಆಗಸ್ಟ್ ತಿಂಗಳವರೆಗೂ ಆಗಲ್ಲ ಅಂತ ನಿಮ್ಮ ಸಚಿವರು ಹೇಳಿದ್ದಾರೆ ಎಂದು ಚಾಟಿ ಬೀಸಿದರು.