ಬೆಂಗಳೂರು: ವಿವಿಧ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಇಂದು ಬೆಂಗಳೂರು ವಿಶ್ವವಿದ್ಯಾಲಯ ಬಂದ್ಗೆ ವಿದ್ಯಾರ್ಥಿಗಳ ಒಕ್ಕೂಟ ಕರೆ ನೀಡಲಾಗಿದೆ.
ಹೌದು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಒಂದ್ಗೆ ಕರೆ ನೀಡಿದ್ದು,ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಮೂಲಸೌಕರ್ಯಗಳು ಇಲ್ಲ. ಸರಿಯಾದ ಸೌಲಭ್ಯಗಳಿಲ್ಲ. ವಿವಿಗೆ ನ್ಯಾಕ್ ಎ ಡಬಲ್ ಪ್ಲಸ್ ಬಂದಿದ್ದರೂ ವಿದ್ಯಾರ್ಥಿಗಳಿಗೆ ಕೊಡಬೇಕಿದ್ದ ಮೂಲ ಸೌಕರ್ಯ ಕೊಡದೇ ವಿವಿ ಸತಾಯಿಸುತ್ತಿದೆ ಅಂತ ಒಕ್ಕೂಟ ಆರೋಪಿಸಿ ಬಂದ್ ಕರೆ ನೀಡಿದ್ದಾರೆ.
ಇವತ್ತು ಸುಮಾರು 52 ವಿಭಾಗದ 3 ಸಾವಿರ ವಿದ್ಯಾರ್ಥಿಗಳು ಇಂದು ತರಗತಿಗೆ ಗೈರು ಹಾಜರಾಗಲು ನಿರ್ಧಾರ ಮಾಡಿದ್ದು,
ವಿದ್ಯಾರ್ಥಿಗಳ ಮೂಲ ಬೇಡಿಕೆಯೇನು?
- ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳು
- ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮ ಹಾಸ್ಟೆಲ್ ವ್ಯವಸ್ಥೆ
- ಸ್ಮಾರ್ಟ್ ಕ್ಲಾಸ್
- ಸ್ಕಿಲ್ ಡೆವೆಲಪ್ಮೇಂಟ್ ಕ್ಲಾಸ್
- ಉತ್ತಮ ಲ್ಯಾಬ್ ವ್ಯವಸ್ಥೆ
- ಸ್ವಿಮ್ಮಿಂಗ್ ಪೂಲ್ ದುರಸ್ತಿ
- ಕೋಚಿಂಗ್ ಕ್ಲಾಸ್
- 24/7 ಗ್ರಂಥಾಲಯಕ್ಕೆ ಬೇಡಿಕೆ
- ಕುಡಿಯುವ ನೀರಿನ ವ್ಯವಸ್ಥೆ
- ಕ್ರಿಡೋಪಕರಣಗಳು
– ದೈಹಿಕ ವ್ಯಾಯಾಮ ಶಾಲೆ
– ಉತ್ತಮ ಹೊರ ಕ್ರೀಡಾಂಗಣ
– ಉತ್ತಮ ಒಳ ಕ್ರೀಡಾಂಗಣ
ಇವೆಲ್ಲಾ ಬೇಡಿಕೆಗಳನ್ನು ವಿದ್ಯಾರ್ಥಿಗಳು ಕಾಲೇಜು ಮಂಡಳಿಯ ಮುಂದೆಯಿಟ್ಟು ಇಂದು ಹೋರಾಟ ಮಾಡಲಿದ್ದಾರೆ.