ಬೆಂಗಳೂರು: ಉಪಚುನಾವಣ ಕದನ ಮುಗಿದಿದೆ, ನಾಳೆನ ಫಲಿತಾಂಶಕ್ಕಾಗಿ ರಾಜಕೀಯ ಪಕ್ಷಗಳು ಸೇರಿದಂತೆ ಯಡಿಯೂರಪ್ಪ, ಸಿದದರಾಮಯ್ಯ , ಕುಮಾರಸ್ವಾಮಿ ಎಲ್ಲರೂ ಕೂತುಹಲದಿಂದ ಕಾಯುತ್ತಿದ್ದಾರೆ. ಒಂದು ಕಡೆ ಅಭಿಮಾನಿಗಳು ಸೀಟುಗಳ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಬೆನ್ನು ಬಿದ್ದಿದ್ದು ,ಇನ್ನೊಂದು ಕಡೆ ರಾಜಕೀಯ ನಾಯಕರುಗಳ ಲೆಕ್ಕಾಚಾರ ಶುರುವಾಗಿವೆ.
ಕರ್ನಾಟಕದ ವಿಧಾನಸಭೆಯ ಬಲ 224 ಪ್ರಸ್ತುತ ಈಗಿರುವುದು 222 ,ಸರಳ ಬಹುಮತಕ್ಕೆ 112 ಸೀಟು ಬೇಕಾಗಿದೆ.
ಸದ್ಯ ವಿಧಾನಸಭೆಯ ಬಲಾಬಲ
ಬಿಜೆಪಿ -105
ಕಾಂಗ್ರೆಸ್ -66
ಜೆಡಿಎಸ್ -34
ಬಿಎಸ್ಪಿ -1
ಪಕ್ಷೇತರ -1
ಖಾಲಿ -2
ಉಪಚುನಾವಣೆ ನಡೆದ ಒಟ್ಟು ಕ್ಷೇತ್ರಗಳು 15
7 ಕ್ಕೂ ಹೆಚ್ಚು ಸ್ಥಾನ ಗೆದ್ದರಷ್ಟೇ ಬಿಜೆಪಿಗೆ ಬಹುಮತ, ಇಲ್ಲಾದಿದ್ದರೆ ರಾಜ್ಯ ರಾಜಕೀಯವೇ ಅದಲು-ಬದಲಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಒಂದು ವೇಳೆ ಬಿಜೆಪಿ 5 ಸ್ಥಾನಕ್ಕಿಂತ ಕಡಿಮೆ ಗೆದ್ದರೆ ಸರ್ಕಾರಕ್ಕೆ ತೊಂದರೆ ಕಟ್ಟಿಟ್ಟಬುತ್ತಿ. ಹೊಸ ರಾಜಕೀಯ ಲೆಕ್ಕಾಚಾರ ಗರಿಗೇದರುತ್ತದೆ.
ಅಗತ್ಯಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾತುಕತೆ ಬಿಜೆಪಿ ಮುಂದಾಗಬಹುದು. ಇಲ್ಲವೆ ಕಾಂಗ್ರೆಸ್ ಮತ್ತೆ ಜೆಡಿಎಸ್ ಜೊತೆ ಕೈ ಜೋಡಿಸುಲು ಮಾತುಕತೆ ನಡೆಸಬಹುದು.
ಸಮೀಕ್ಷೆಗಳು ಬಿಜೆಪಿ ಅಗತ್ಯಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಹೇಳಿವೆ . ಸಮೀಕ್ಷೆ ಉಲ್ಟಾ ಹೊಡೆದು ಅತಂತ್ರ ಸ್ಥಿತಿ ಉಂಟಾದರೆ ಸಾರ್ವತ್ರಿಕ ಚುನಾವಣೆ ಎದುರಾಗಬಹುದು , ಸದ್ಯದ ಪರಿಸ್ಥಿತಿ ಅವಲೋಕಿಸಿದಾಗ ರಾಜಕೀಯ ನಾಯಕರುಗಳು ಚುನಾವಣೆ ಕಡೆ ಮುಖ ಮಾಡುವುದು ಅನುಮಾನ . ಒಟ್ಟಾರೆ ನಾಳೆಯ ಉಪಚುನಾವಣೆ ರಿಸಲ್ಟ್ ಮೇಲೆ ಕರ್ನಾಟಕ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ .