Saturday, November 2, 2024

ವರುಣಾ ನಿರುದ್ಯೋಗಿ ಹಸ್ತಕ್ಷೇಪ ಮಿತಿ ಮೀರಿದೆ : ಬಿಜೆಪಿ ಲೇವಡಿ

ಬೆಂಗಳೂರು : ಅಧಿಕಾರಿಗಳ ವರ್ಗಾವಣೆ ವಿಷಯ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷಗಳ ನಡುವಿನ ಟ್ವೀಟ್ ಸಮರಕ್ಕೆ ವೇದಿಕೆಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದ ಎಟಿಎಂ ಸರ್ಕಾರದಲ್ಲಿ ವರುಣಾದ ನಿರುದ್ಯೋಗಿ ಶ್ಯಾಡೋ ಸಿಎಂ ಡಾ.ಯತೀಂದ್ರ ಸಿದ್ದರಾಮಯ್ಯರ ಹಸ್ತಕ್ಷೇಪ ಮಿತಿ ಮೀರಿದೆ ಎಂದು ಕುಟುಕಿದೆ.

ಒಂದೇ ಹುದ್ದೆಗೆ ಹಲವು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಶಿಫಾರಸ್ಸು ಪತ್ರ ನೀಡುವುದು. ಕಾರ್ಯವಾದ ಬಳಿಕ ವ್ಯವಹಾರ ಕುದುರದಿದ್ದಲ್ಲಿ ಆದೇಶವನ್ನು ಹಿಂಪಡೆಯುವುದು. ಹೀಗೆ ಹಲವಾರು ಅಕ್ರಮಗಳನ್ನು ಮುಖ್ಯಮಂತ್ರಿ ಕಚೇರಿ ಮೂಲಕ ರಾಜಾರೋಷವಾಗಿ ನಡೆಸುತ್ತಾ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಚಾಟಿ ಬೀಸಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ಮಾತಿಗೆ ನಕ್ಕು ನಕ್ಕು ಸುಸ್ತಾದ ಬಿಜೆಪಿ ಶಾಸಕರು

ಅಕ್ರಮ ದಂಧೆಗೆ ಸಕ್ರಮದ ಲೇಬಲ್

ಇಷ್ಟು ಸಾಲದ್ದಕ್ಕೆ, ತನಗೊಂದು ಸಾಂವಿಧಾನಿಕ ಹುದ್ದೆ ಕಬಳಿಸಿಕೊಳ್ಳಲು ಶ್ಯಾಡೋ ಸಿಎಂ ಸ್ಕೆಚ್ ಹಾಕಿದ್ದಾರೆ. ತನ್ನ ಅಕ್ರಮ ದಂಧೆಗಳಿಗೆ ಸಕ್ರಮದ ಲೇಬಲ್ ಅಂಟಿಸುವ ಬಗ್ಗೆ ಗಾಢವಾಗಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ವರ್ಗಾವಣೆ ‌ದಂಧೆಯಲ್ಲಿ ಯಶಸ್ವಿ

ನಾಮಕಾವಸ್ಥೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನ ಶ್ಯಾಡೋ ಸಿಎಂ ಮಾಡಿ, ಅಧಿಕಾರವನ್ನು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರಿಗೆ ಕೊಟ್ಟಿದ್ದಾರೆ. ಪರಿಣಾಮ, ರಾಜ್ಯದಲ್ಲಿ ಸಚಿವರು, ಶಾಸಕರ ಸಂಬಂಧಿಕರ ದರ್ಬಾರ್ ಜೋರಾಗಿದೆ.‌ ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವರ್ಗಾವಣೆ ‌ದಂಧೆಯಲ್ಲಿ ಯಶಸ್ವಿಯಾಗಿ ಅಣ್ಣನ ಮಗನನ್ನ ಡಿಎಚ್ಓ ಆಗಿ‌ ನೇಮಕ ಮಾಡಿದ್ದಾರೆ.

RELATED ARTICLES

Related Articles

TRENDING ARTICLES