Monday, May 20, 2024

ನಾನೇನು ಮೋದಿಯವರ ವಿರುದ್ಧ ಮಾತನಾಡಿದ್ದೇನಾ? : ರೇಣುಕಾಚಾರ್ಯ ಗುಡುಗು

ದಾವಣಗೆರೆ : ನಾನೇನು ಬಿಜೆಪಿ ಪಕ್ಷ, ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡಿದ್ದೇನಾ? ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಗುಡುಗಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಿಸ್ ಗೆ ನಾನೇಕೆ ಉತ್ತರ ಕೊಡಬೇಕು ಎಂದು ಮತ್ತೊಮ್ಮೆ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಕಚೇರಿಯಲ್ಲಿ 11 ಜನರಿಗೆ ನೋಟಿಸ್ ನೀಡಿದ್ದೇವೆ ಅಂತ ಹೇಳ್ತಾರೆ. ಹೊರಗೆ ಬಂದು ನನ್ನೊಬ್ಬನಿಗೆ ನೋಟಿಸ್ ಅಂತ ಹೇಳ್ತಾರೆ. ನಾನು ಬಿಜೆಪಿ ಶಿಸ್ತು ಸಮಿತಿಯಿಂದ ಕೊಟ್ಟಿರುವ ನೋಟಿಸ್ ಗೆ ಯಾವುದೇ ಉತ್ತರ ಕೊಡುವುದಿಲ್ಲ ಎಂದು ಗರಂ ಆದರು.

ನನ್ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ರೆ..!

ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದು ನನಗೆ ಗೊತ್ತಿಲ್ಲ. ಶಿಸ್ತು ಸಮಿತಿ ನನ್ನೊಬ್ಬನಿಗೆ ನೋಟಿಸ್ ನೀಡಿ ಬೇರೆಯವರಿಗೆ ಏಕೆ ನೀಡಿಲ್ಲ. ರೇಣುಕಾಚಾರ್ಯನ ಬಾಯಿ ಮುಚ್ಚಿಸಲು ಯಾರಿಂದಲು ಸಾಧ್ಯವಿಲ್ಲ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ರೆ ಪಕ್ಷವನ್ನು ಸದೃಢವಾಗಿ ಕಟ್ಟಲು ಸಮರ್ಥನಿದ್ದೇನೆ ಎಂದು ರಾಜ್ಯಾಧ್ಯಕ್ಷ ಸ್ಥಾನದ ಇಂಗಿತ ವ್ಯಕ್ತಪಡಿಸಿದರು.

ಇದನ್ನೂ ಓದಿ : ಇಂದು ವಿಪಕ್ಷ ನಾಯಕನ ಘೋಷಣೆ ಆಗಬಹುದು : ಬಿ.ಎಸ್.ಯಡಿಯೂರಪ್ಪ

ನಾನು ಕಾಂಗ್ರೆಸ್ ಗೆ ಹೋಗಲ್ಲ

ನಾನು ಕಾಂಗ್ರೆಸ್ ಗೆ ಹೋಗೊಲ್ಲ. ಕಾಂಗ್ರೆಸ್ ಮುಖಂಡರ ಜೊತೆ ರಾಜಕೀಯ ಹೊರತಾದ ಉತ್ತಮ ಸ್ನೇಹ ಸಂಬಂಧ ಇದೆ. ಶಾಮನೂರು ಶಿವಶಂಕರಪ್ಪನವರ ಜೊತೆಯಲ್ಲಿ ಮೈಸೂರಿಗೆ ಪ್ಲೈಟ್ ನಲ್ಲಿ ಒಂದು ಬಾರಿ ಹೋಗಿದ್ದೇನು. ಶಾಮನೂರು ಪ್ರೀತಿಯಿಂದ ನನಗೆ ನನ್ನ ಪ್ಲೈಟ್ ನಲ್ಲಿ ಬರುವಂತೆ ಆಹ್ವಾನ ನೀಡಿದ್ದರು ಎಂದು ತಿಳಿಸಿದರು.

ಸಿಎಂ, ಡಿಕೆಶಿ ಜೊತೆ ಮಾತನಾಡಿದ್ದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ನಾನು ಪೋನ್ ಮಾಡಿ ಸಮಯ ತೆಗೆದುಕೊಂಡು ಹೋಗಿ ಮಾತನಾಡಿದ್ದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ, ನಾನು ಕಾಂಗ್ರೆಸ್ ಹೋಗೊಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸೇರ್ಪಡೆ ವದಂತಿಗಳಿಗೆ ರೇಣುಕಾಚಾರ್ಯ ತೆರೆ ಎಳೆದರು.

RELATED ARTICLES

Related Articles

TRENDING ARTICLES