Friday, November 22, 2024

ನಾಳೆ ಪ್ರೆಶ್ ಆಗಿ ನಮ್ಮ ವಿಪಕ್ಷ ನಾಯಕರು ಬರ್ತಾರೆ : ಡಾ.ಕೆ ಸುಧಾಕರ್

ಚಿಕ್ಕಬಳ್ಳಾಪುರ : ನಾಳೆ ಪ್ರೆಶ್ ಆಗಿ ನಮ್ಮ ವಿರೋಧ ಪಕ್ಷದ ನಾಯಕರು ಬರ್ತಾರೆ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹ ನಿಮ್ಮಷ್ಟೇ ಕುತೂಹಲದಿಂದ ವಿಪಕ್ಷ ನಾಯಕರನ್ನ ಎದುರು ನೋಡ್ತಾ ಇದ್ದೇನೆ ಎಂದು ತಿಳಿಸಿದರು.

ಇವತ್ತಿಂದ ನಾನು ಕ್ಷೇತ್ರದಲ್ಲಿ ಸಕ್ರಿಯವಾಗಿ ಇರ್ತೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಒಂದಾಗಿ ನನ್ನ ಸೋಲಿಸಿದ್ರು. ನಮಗೆ ವೋಟ್ ಎಷ್ಟು ಬಂದಿದೆ, ಎಲ್ಲಿಂದ ಬಂತು? ಕೇವಲ ನಮ್ಮ ನಿಮ್ಮಂಥಹವರು ಹಾಕಿದ್ದಾರಾ? ಯಾರ ಸೋಲಿಗೆ, ಗೆಲುವಿಗೂ ಯಾರು ಕಾರಣರಲ್ಲ ಎಂದು ಕುಟುಕಿದರು.

ಪ್ರದೀಪ್ ಮುಖ ನೋಡಿದ್ದೇ ಚುನಾವಣೆಯಲ್ಲಿ

ಕೆಲವು ಪಕ್ಷಗಳು ಕಾರಾಣಾಂತರಗಳಿಂದ ಒಂದಾಗಿದ್ದವು. ಜೆಡಿಎಸ್ ನವರಿಗೂ ಮಿಸ್ ಗೈಡ್ ಮಾಡಿ ಕೊನೆ ಹಂತದಲ್ಲಿ ತೆಗೆದುಕೊಂಡ ನಿರ್ಧಾರ. ಅವರ ಸೇವೆ, ಸಾಧನೆ ನೋಡಿ ಈ ಕ್ಷೇತ್ರದ ಜನ ಮತ ನೀಡಿಲ್ಲ. ಪ್ರದೀಪ್ ಈಶ್ವರ್ ಮುಖ ನೋಡಿದ್ದೇ ಚುನಾವಣೆಯಲ್ಲಿ ಎಂದು ಡಾ.ಕೆ ಸುಧಾಕರ್ ಗುಡುಗಿದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರಕ್ಕಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಸರ್ಕಾರ ಟೇಕಾಫ್ ಆಗ್ಲಿ, ಮಾತಾಡ್ತೀನಿ

ಗ್ಯಾರಂಟಿಗಳ ಬಗ್ಗೆ ನಾನು ಈಗಲೇ ಟೀಕೆ ಮಾಡಲು ಹೋಗಲ್ಲ. ಸರ್ಕಾರ ಟೇಕಾಫ್ ಆದ ಮೇಲೆ ಮಾತನಾಡುತ್ತೇನೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ರಾಜ್ಯದಲ್ಲಿ ಎಲ್ಲಾ ದಿನಸಿ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಆಗಿದೆ. ಚಿಕ್ಕಬಳ್ಳಾಪುರ ಬ್ರ್ಯಾಂಡ್ ಚಿಕ್ಕಬಳ್ಳಾಪುರ ಆಗಿದೆ. ಅದನ್ನು ಉಳಿಸಿ ಬೆಳಸಿಕೊಂಡು ಹೋಗ್ತೀರಿ ಅಂತ ನಂಬಿದ್ದೇನೆ. ದ್ವೇಷದ ರಾಜಕಾರಣ ಮಾಡದೇ ರಾಜ್ಯದ ಅಭಿವೃದ್ದಿ ಕಡೆ ಗಮನ ಸೆಳೆಯಲಿ ಎಂದು ಹೇಳಿದರು.

ಚಿಮುಲ್ ಚಿಕ್ಕಬಳ್ಳಾಪುರದಲ್ಲಿ ಪುನರ್ ಸ್ಥಾಪಿಸುವಂತೆ ಕಾನೂನು ಹೋರಾಟ ಮಾಡುತ್ತೇವೆ. ಹತ್ತು ದಿನಗಳ ಬಜೆಟ್ ಅಧಿವೇಶನದಲ್ಲಿ ಜಿಲ್ಲೆಗೆ ಬೇಕಾದಂತಹ ಕೆಲಸಗಳ ಬಗ್ಗೆ ಗಮನ ಸೆಳೆಯಿರಿ ಎಂದು ಪರೋಕ್ಷವಾಗಿ ಪ್ರದೀಪ್ ಈಶ್ವರ್​ಗೆ ಸಲಹೆ ನೀಡಿದರು.

RELATED ARTICLES

Related Articles

TRENDING ARTICLES