Friday, September 20, 2024

ಸಿ.ಟಿ ರವಿ ಮೊದ್ಲು ತಮ್ಮ ಪಂಚೆ ಸರಿ ಮಾಡಿಕೊಳ್ಳಲಿ : ಚಲುವರಾಯಸ್ವಾಮಿ ತಿರುಗೇಟು

ಮೈಸೂರು : ಸಿ.ಟಿ ರವಿ ಮೊದಲು ತಮ್ಮ ಪಂಚೆ ಸರಿ ಮಾಡಿಕೊಳ್ಳಲಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಟಕ್ಕರ್ ಕೊಟ್ಟರು.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪಂಚೆ ರಾಜಕೀಯದ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಚುನಾವಣೆಯಲ್ಲಿ ಈಗೆ ಮಾತಾಡಿ, ಮಾತಾಡಿ ಜನ ಉತ್ತರ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಉತ್ತರವೇ ಅಂತಿಮ. 65 ಸ್ಥಾನಕ್ಕೆ ಕುಸಿದಿರುವ ಬಿಜೆಪಿಯವರಲ್ಲಿ ಕಚ್ಚಾಟ ಇಲ್ವಾ? ನಮ್ಮಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಏನು ಕಿತ್ತಾಡುತ್ತಿದ್ದಾರಾ? ಸುಮ್ಮನೇ ಅವರೇ ಕಲ್ಪಿಸಿಕೊಂಡು ಮಾತಾನಡುತ್ತಾರೆ ಎಂದು ಕುಟುಕಿದರು.

ಒಬ್ಬರು, ಇಬ್ಬರು ಉಳಿದುಕೊಂಡಿದ್ದಾರೆ

ಮನಸಿಗೆ ಬಂದಂತೆ ಮಾತನಾಡಿದವರನ್ನು ಜನರು ಮಲಗಿಸಿದ್ದಾರೆ. ಅದರಲ್ಲಿ ಒಬ್ಬರು, ಇಬ್ಬರು ಉಳಿದುಕೊಂಡಿದ್ದಾರೆ. ಜನ ಈಗ ಉತ್ತರ ಕೊಟ್ಟಿದ್ದಾರೆ. ನಮ್ಮ ಪಂಚೆ ಸರಿ ಮಾಡೊದು ಬೇಡ. ಮೊದಲು ಅವರ ಪಂಚೆ ಸರಿ ಮಾಡಿಕೊಳ್ಳೋಕೆ ಹೇಳಿ ಎಂದು ಸಿದ್ದು, ಡಿಕೆಶಿ ಪಂಚೆ ಬಗ್ಗೆ ಮಾತಾಡಿದ ಸಿ.ಟಿ ರವಿಗೆ ತಿರುಗೇಟು ಕೊಟ್ಟರು.

ಇದನ್ನೂ ಓದಿ : ಸಿದ್ದರಾಮಯ್ಯ ಏನು ಚಪ್ಪರಾಸಿ ಅಲ್ವಲ್ಲಾ? : ಸಿ.ಟಿ ರವಿ 

ಮಾತಾಡಿ ಪ್ರಚಾರ ತಗೊಳೋಕೆ ನೋಡ್ತಾರೆ

ದಿನ ಬೆಳಗಾದ್ರೆ ಜೆಡಿಎಸ್ ಹಾಗೂ ಬಿಜೆಪಿಯವರು ನಿಮ್ಮ ಮುಂದೆ ಏನೇನೋ ಮಾತಾಡಿ ಪ್ರಚಾರ ತಗೊಳೋಕೆ ನೋಡುತ್ತಾರೆ. ಗ್ಯಾರಂಟಿ ಯೋಜ‌ನೆಗಳು ಜಾರಿ ಆಗೋದೇ ಇಲ್ಲ ಅಂತ ಎರಡೂ ಪಕ್ಷ ಹೋರಾಟ ಮಾಡುತ್ತಿವೆ. ದೇಶದ‌ ಇತಿಹಾಸದಲ್ಲೇ ಯಾವುದೇ ಸರ್ಕಾರ ಈ ರೀತಿ ಮಾಡಿದೆಯಾ? ಎಂದು ಚಾಟಿ ಬೀಸಿದರು.

ಜುಲೈ 4ರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಧರಣಿ ವಿಚಾರ ಕುರಿತು ಮಾತನಾಡಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಾಮ್ರಾಟ್ ಅಶೋಕ್, ಸಿ.ಟಿ ರವಿ ಎಲ್ಲರೂ ಬಂದು ಹೋರಾಟ ಮಾಡಲಿ ಎಂದು ಚಲುವರಾಯಸ್ವಾಮಿ ಸ್ವಾಗತ ಕೋರಿದರು.

RELATED ARTICLES

Related Articles

TRENDING ARTICLES