ಬೆಂಗಳೂರು : ಅನ್ನಭಾಗ್ಯ ಅಕ್ಕಿಯ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿರುವ ಟ್ವೀಟ್ ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಅನ್ನಭಾಗ್ಯ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು,
ಹತ್ತು ಕೆಜಿ ಅಕ್ಕಿ ಕೊಡದೇ ದೋಖಾ, ವಂಚನೆ ಮಾಡಿದೆ” ಎಂದು ಟ್ವೀಟ್ ಮಾಡಿರುವ
ಬೊಮ್ಮಾಯಿಯವರಿಗೆ ಸಚಿವ ದಿನೇಶ್ ಗುಂಡೂರಾವ್ ಟಾಂಗ್ ನೀಟಿದ್ದಾರೆ.
“ನಿಮ್ಮ ಹೊಟ್ಟೆಯೊಳಗಿನ ಸಂಕಟ, ಬೇಗುದಿ ಏನೆಂದೇ? ಅರ್ಥವಾಗುತ್ತಿಲ್ಲ
ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಆಕಾಶ ಭೂಮಿ ಒಂದಾಗುವಂತೆ ದೊಂಬಿ ಎಬ್ಬಿಸಿದ್ದು ನೀವು ಮತ್ತು ನಿಮ್ಮ ಪಕ್ಷದವರು ಈಗ ಅಕ್ಕಿ ಬದಲು ನಾವು ಹಣ ಕೊಟ್ಟರೆ ಅಲ್ಲೂ ಹುಳುಕು ಹುಡುಕುತ್ತಿದ್ದೀರಿ” ಎಂದು ವಾಗ್ದಾಳಿ ನಡೆಸಿದ್ದಾರೆ.
1@BSBommaiಯವರೆ ನಿಮ್ಮ ಹೊಟ್ಟೆಯೊಳಗಿನ ಸಂಕಟ ಮತ್ತು ಬೇಗುದಿ ಏನೆಂದೇ ಅರ್ಥವಾಗುತ್ತಿಲ್ಲ.
ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಆಕಾಶ ಭೂಮಿ ಒಂದಾಗುವಂತೆ ದೊಂಬಿ ಎಬ್ಬಿಸಿದ್ದು ನೀವು ಮತ್ತು ನಿಮ್ಮ ಪಕ್ಷದವರು.
ಈಗ ಅಕ್ಕಿ ಬದಲು ನಾವು ಹಣ ಕೊಟ್ಟರೆ ಅಲ್ಲೂ ಹುಳುಕು ಹುಡುಕುತ್ತಿದ್ದೀರಿ.
ಈ ನಿಮ್ಮ ರೋಗಕ್ಕೆ ಮದ್ದೆಲ್ಲಿಂದ ತರುವುದು? pic.twitter.com/nmGXrbMkZU
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 29, 2023
“ಈ ನಿಮ್ಮ ರೋಗಕ್ಕೆ ಮದ್ದೆಲ್ಲಿಂದ ತರುವುದು?ಬೊಮ್ಮಾಯಿಯವರೇ, ನಾವು ದುಡ್ಡು ಕೊಡುತ್ತೀವಿ ಎಂದರೂ ಕೇಂದ್ರ ಅಕ್ಕಿ ಕೊಡಲಿಲ್ಲ ಕೇಂದ್ರಕ್ಕೆ ಕೊಡುವ ದುಡ್ಡನ್ನೇ ನಾವೀಗ ಜನರಿಗೆ ಕೊಡುತ್ತಿದ್ದೇವೆ, ನಿಮ್ಮ ಪಕ್ಷದವರಿಗೆ ಅನ್ನಭಾಗ್ಯ ಯೋಜನೆ ಅನುಷ್ಟಾನದ ಇಷ್ಟವಿಲ್ಲ ಹಾಗಾಗಿ ಅಕ್ಕಿ ಸಿಗದಂತೆ ಮಾಡಿದಿರಿ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಟ್ರಿಪ್ ಹೋದ ಹೆಂಡ್ತಿ ಬಂದಿಲ್ಲ ಅಂತ ಬಸ್ ಟೈರ್ ಗೆ ತಲೆ ಕೊಟ್ಟ ಗಂಡ
“ಅಕ್ಕಿಯ ಬದಲು ದುಡ್ಡು ಕೊಡುತ್ತಿರುವುದು ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ, ಬೊಮ್ಮಾಯಿಯವರೇ ಗುಣಕ್ಕೆ ಮತ್ಸರವಿರಬಾರದು. ಅದೇ ರೀತಿ ಯಾರಾದರೂ ಜನರಿಗೆ ಒಳ್ಳೆಯದು ಮಾಡುತ್ತಿದ್ದರೆ
ಅವರು ನಿಮ್ಮ ಶತ್ರುಗಳಾದರೂ ಅವರ ಮೇಲೆ ಮತ್ಸರವಿರಬಾರದು” ಎಂದು ಪಾಠ ಮಾಡಿದ್ದಾರೆ.
ಅಲ್ಲದೆ “ನೀವು ಅಧಿಕಾರದಲ್ಲಿದ್ದಾಗ ಜನರಿಗೆ ಒಳ್ಳೆಯದನ್ನು ಮಾಡಲಿಲ್ಲ. ನಿಮ್ಮ ಕೈಲಾಗದ್ದನ್ನು ನಾವು ಮಾಡುತ್ತಿದ್ದೇವೆ ಇದಕ್ಯಾಕೆ ಹೊಟ್ಟೆಕಿಚ್ಚು? ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಯಾಕೆ?” ಎಂದು ಬೊಮ್ಮಾಯಿಯವರ ಕಾಲೆಳೆದಿದ್ದಾರೆ.