ವಿಜಯಪುರ : ಸುಳ್ಳು ಸುದ್ದಿಗೆ ಕಡಿವಾಣ ಹಾಕಲು ಮೊದಲ ಪ್ರಕರಣ ಸತೀಶ್ ಜಾರಕಿಹೊಳಿ ಮೇಲೆ ದಾಖಲಿಸಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯತ್ನಾಳ್, ಸೇವಾ ಸಿಂಧು ಸರ್ವರ್ ಹ್ಯಾಕ್ ಆಗಿದ್ದೇ ಆದರೆ ಯಾವ ಸಮಯದಲ್ಲಾಗಿತ್ತು? ಯಾರಿಂದ ಅಂತ ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ.
ಗೃಹ ಸಚಿವ ಡಾ.ಜಿ ಪರಮೇಶ್ವರ ಅವರೇ, ನಿಮ್ಮ ಮಂತ್ರಿಗಳು ಸೇವಾ ಸಿಂಧು ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಅಂತ ಸುಳ್ಳು ಹೇಳಿಕೆ ನೀಡಿದ್ದಾರೆ. ಇದು ನಿಜವೇ? ಈ ಬಗ್ಗೆ ಯಾವ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
Dr G Parameshwara ರವರೇ ,
ನಿಮ್ಮ ಮಂತ್ರಿಗಳು "ಸೇವಾ ಸಿಂಧು" ಸರ್ವರ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಹೇಳಿದ್ದಾರೆ. ಇದು ನಿಜವೇ? ಈ ಬಗ್ಗೆ ಯಾವ ಠಾಣೆಯಲ್ಲಿ ಮೊಕದ್ದಮೆ ಧಾಖಲಾಗಿದೆ?
ಕೇಂದ್ರ ಸರ್ಕಾರದ ಮೇಲೆ ಇಂತಹ ಆರೋಪಗಳನ್ನು ಮಾಡಿ ಕೇಂದ್ರ ಹಾಗು ರಾಜ್ಯದ ನಡುವಿನ ಸಂಬಂಧ ಹಾಳುಮಾಡುವುದು ದ್ರೋಹವಲ್ಲವೇ?
ಸೇವಾ ಸಿಂಧು…
— Basanagouda R Patil (Yatnal) (@BasanagoudaBJP) June 21, 2023
ಕೇಂದ್ರ ಸರ್ಕಾರದ ಮೇಲೆ ಇಂತಹ ಆರೋಪಗಳನ್ನು ಮಾಡಿ ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಬಂಧ ಹಾಳುಮಾಡುವುದು ದ್ರೋಹವಲ್ಲವೇ? ನಿಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವಂತೆ ‘Fake New’ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಪ್ರಕರಣ ಸತೀಶ್ ಜಾರಕಿಹೊಳಿ ಮೇಲೆ ದಾಖಲಿಸಿ ಎಂದು ಛೇಡಿಸಿದ್ದಾರೆ.