Friday, November 22, 2024

ಸಿಇಟಿ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ ಬೆಂಗಳೂರು : ಇಲ್ಲಿದೆ ಟಾಪರ್ಸ್​ಗಳ ಸಂಪೂರ್ಣ ಪಟ್ಟಿ

ಬೆಂಗಳೂರು : ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ನಡೆದ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಸಿಇಟಿ ಪಟ್ಟಿಯಲ್ಲಿ ಬೆಂಗಳೂರು ಪ್ರಾಬಲ್ಯ ಸಾಧಿಸಿದೆ.

ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅಧಿಕೃತವಾಗಿ ಸಿಇಟಿ ಫಲಿತಾಂಶ ಪ್ರಕಟಿಸಿದರು. ಕಳೆದ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಈ ಬಾರಿ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ಸಂಗೋಪನೆ, ಯೋಗ ಮತ್ತು ನ್ಯಾಚುರೋಪತಿಗೆ ಸಿಇಟಿ ನಡೆಸಲಾಗಿತ್ತು.

ಇದಲ್ಲದೆ ಬಿ ಫಾರ್, ಡಿ ಫಾರಂ ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗಳಿಗೆ ಸಿಇಟಿ ಪರೀಕ್ಷೆಯನ್ನು ನಡೆಸಲಾಗಿದ್ದು, ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 2,44,345 ವಿದ್ಯಾರ್ಥಿಗಳು, 592 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆದಿದ್ದರು.

ಹಾಗಾದ್ರೆ, ಯಾವ್ಯಾವ ವಿದ್ಯಾರ್ಥಿಗಳು, ಯಾವ್ಯಾವ ಕೋರ್ಸ್‌ಗಳಲ್ಲಿ ರ್ಯಾಂಕ್ ಪಡೆದು ಕೊಂಡಿದ್ದಾರೆ ಅಂತ ನೋಡುವುದಾದರೆ..

ಇಂಜಿನಿಯರಿಂಗ್ ಕೋರ್ಸ್ ಪ್ರವೇಶಾತಿ ಪರೀಕ್ಷೆಯಲ್ಲಿ ಟಾಪರ್ಸ್

  1. ವಿಜ್ಞೇಶ್ ನಟರಾಜ್ ಕುಮಾರ್ : 97.88%
  2. ಅರ್ಜುನ್ ಕೃಷ್ಣಸ್ವಾಮಿ : 97.5%
  3. ಸಮೃದ್ಧ ಶೆಟ್ಟಿ : 97.167%

ಯೋಗ ಮತ್ತು ನ್ಯಾಚುರೋಪತಿ

  1. ಪ್ರತೀಕ್ಷಾ ಆರ್ : 98.61%
  2. ಬೈರೇಶ್ ಎಸ್​.ಎಚ್ : 98.16%
  3. ಶ್ರೀಜನ್ ಎಂ.ಎಚ್ : 97.88%

ಇದನ್ನೂ ಓದಿ : ದ್ವಿತೀಯ PUC ರಿಸಲ್ಟ್​ ಪ್ರಕಟ : ರಿಸಲ್ಟ್ ನೋಡಲು ಹೀಗೆ ಮಾಡಿ

ಬಿ.ಎಸ್.ಸಿ ಅಗ್ರಿಕಲ್ಚರ್ ಟಾಪರ್ಸ್

  1. ಬೈರೇಶ್ ಎಸ್​.ಎಚ್ : 96.75%
  2. ಅನುರಾಗ ರಂಜನ್ : 95.41%
  3. ಕಾರ್ತಿಕ್ ಮನೋಹರ್ : 95.25%

ಪಶು ಸಂಗೋಪನ ವಿಜ್ಞಾನದ ಟಾಪರ್ಸ್

  1. ಮಾಳವಿಕಾ ಕಪೂರ್ : 97.22%
  2. ಪ್ರತೀಕ್ಷಾ .ಆರ್ : 97.22%
  3. ಚಂದನ್ ಗೌಡ ಸಿ.ಎನ್ : 96.66%

ಬಿ ಫಾರ್ಮಾ ಹಾಗೂ ಡಿ ಫಾರ್ಮಾ ಟಾಪರ್ಸ್

  1. ಪ್ರತೀಕ್ಷಾ ಆರ್ : 97.22%
  2. ಮಾಳವಿಕಾ ಕಪೂರ್ : 97.22%
  3. ಮಾಧವ ಸೂರ್ಯ ತಡೇಪಲ್ಲು : 96.66%

ಬಿಎಸ್​ಸಿ ನರ್ಸಿಂಗ್ ಟಾಪರ್ಸ್

  1. ಮಾಳವಿಕಾ ಕಪೂರ್ : 97.22%
  2. ಪ್ರತಿಕ್ಷ ಆರ್ : 97.22%
  3. ಚಂದನ್ ಗೌಡ ಸಿಎನ್ ಮಹೇಶ್ : 96.66%

ಒಟ್ಟಿನಲ್ಲಿ, ಬಹುನಿರೀಕ್ಷಿತ ಸಿಇಟಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರದಲ್ಲಿ 60ಕ್ಕೆ 60 ಅಂಕಗಳನ್ನು ಯಾರೂ ಪಡೆದಿಲ್ಲ. ಗಣಿತದಲ್ಲಿ 4 ಮಂದಿ ಹಾಗೂ ಜೀವಶಾಸ್ತ್ರದಲ್ಲಿ 135 ಅಭ್ಯರ್ಥಿಗಳು 60ಕ್ಕೆ 60 ಅಂಕಗಳನ್ನು ಪಡೆದಿದ್ದು, ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.

RELATED ARTICLES

Related Articles

TRENDING ARTICLES