Saturday, November 23, 2024

ಡಿಜಿಟಲೀಕರಣದಲ್ಲಿ ಕೆ.ಸಿ ಜನರಲ್ ಆಸ್ಪತ್ರೆ ನಂ-1

ಬೆಂಗಳೂರು: ಆರೋಗ್ಯ ಇತಿಹಾಸದಲ್ಲಿ ಡಿಜಿಟಲೀಕರಣದಿಂದಾಗಿ ರೋಗಿಗಳಿಗೆ ಚಿಕಿತ್ಸೆಯ ಮಾಹಿತಿ ಸುಲಭವಾಗಿ ಸಿಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಪೋರ್ಟಲ್​​ಗಳಿಗೆ ಆರೋಗ್ಯ ಖಾತೆಯನ್ನು ಲಿಂಕ್ ಮಾಡಿಸುವಲ್ಲಿ ಕೆ.ಸಿ ಜನರಲ್ ಆಸ್ಪತ್ರೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

ಇದು ಕಾಗದ ರಹಿತ ಸೇವೆಯಾಗಿದ್ದು, ಈವರೆಗೂ ಸುಮಾರು 46,000 ಆರೋಗ್ಯ ದಾಖಲಾತಿಯ ಲಿಂಕ್ ಮಾಡಲಾಗಿದೆ. ಈವರೆಗೂ ಸುಮಾರು 86,000 ರೋಗಿಗಳ ವೈದ್ಯಕೀಯ ಇತಿಹಾಸ ಡಿಜಿಟಲೀಕರಣವಾಗಿದೆ. ಇನ್ನೂ ಡಿಜಿಟಲೀಕರಣದಲ್ಲಿ ಧಾರವಾಡ ಜಿಲ್ಲಾಸ್ಪತ್ರೆಯೂ ಎರಡನೇ ಸ್ಥಾನ ಹಾಗೂ ಜಯನಗರ ಆಸ್ಪತ್ರೆ 3ನೇ ಸ್ಥಾನದಲ್ಲಿದೆ.

ಈ ವ್ಯವಸ್ಥೆಯಿಂದ ಮೊಬೈಲ್ ಮೂಲಕವೇ ವೈದ್ಯಕೀಯ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬಹುದು. ಇದರಿಂದ ರೋಗಿಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯಕವಾಗಿದೆ. ಔಷಧಿ ಮಳಿಗೆಗಳಿಗೆ ಹಾಗೂ ಪ್ರಯೋಗಾಲಯಗಳಿಗೂ ಡಿಜಿಟಲೀಕರಣ ನೆರವಾಗಲಿದೆ.

 

RELATED ARTICLES

Related Articles

TRENDING ARTICLES