ಬೆಂಗಳೂರು: ರಾಜ್ಯ ವಿಧಾನಸಭೆ ಸ್ವೀಕರ್ ಸ್ಥಾನಕ್ಕೆ ಯು.ಟಿ ಖಾದರ್ ನಾಮಪತ್ರ ಸಲ್ಲಿಸಲಿದ್ದಾರೆ.
ಹೌದು, ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರು ಖಾದರ್ಗೆ ಕರೆ ಮಾಡಿ,ಸ್ವೀಕರ್ ಆಗುವಂತೆ ಮನವಿ ಮಾಡಿದ್ದರು. ನಿನ್ನೆ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದ್ರೆ ಸ್ಪೀಕರ್ ಆಗಿ ಮುಂದುವರಿಯಲು ಆರ್ ವಿ ದೇಶಪಾಂಡೆ ಹಿಂದೇಟು ಹಾಕಿದ್ದರು.ಆದರೆ ಅವರು ಪೂರ್ಣ ಪ್ರಮಾಣ ಸ್ವೀಕರ್ ಆಗಲು ಹಿಂದೇಟು ಹಾಕಿರುವ ಕಾರಣ ಖಾದರ್ ಅವರಿಗೆ ಸ್ವೀಕರ್ ಸ್ಥಾನ ನೀಡಲಾಗಿದೆ.
ಇನ್ನು ಅನೇಕ ಕಾಂಗ್ರೆಸ್ ಹಿರಿಯ ಶಾಸಕರು ಇದು ನಮ್ಮ ಕೊನೆಯ ಚುನಾವಣೆ ಆಗಿದ್ದು, ನಾವು ಕ್ಷೇತ್ರದ ಜನತೆಯೊಂದಿಗೆ ಇರಬೇಕು. ಆದ್ದರಿಂದ ಸ್ಪೀಕರ್ ಸ್ಥಾನ ನಮಗೆ ಬೇಡ ಎಂದು ಹಿರಿಯ ಶಾಸಕರು ಹೇಳಿದ್ದರು ಎಂದು ತಿಳಿದು ಬಂದಿತ್ತು.
ಇದೀಗ ಹೈಕಮಾಂಡ್ ಸೂಚನೆ ಮೇರೆಗೆ ಸ್ಪೀಕರ್ ಆಗಲು ಯುಟಿ ಖಾದರ್ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ಸ್ಪೀಕರ್ ಸ್ಥಾನಕ್ಕೆ ಯುಟಿ ಖಾದರ್ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.