ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು , ಈ ಬಾರಿ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲು ಮತದಾರರು ಕಾತುರರಾಗಿದ್ದಾರೆ. ಹಾಗಿದ್ದರೆ ನಮಗೆ ಮತದಾನ ಮಾಡಲು ಮುಖ್ಯವಾಗಿ ಬೇಕಿರುವುದು ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುವುದು. ಹೌದು, ನಮ್ಮ ಹೆಸರನ್ನು ಹೇಗೆ ಖಾತ್ರಿ ಮಾಡಿಕೊಳ್ಳಬೇಕು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಚುನಾವಣೆ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟ ಮಾಡಿದ್ದು, ಮತದಾರರ ವಿವರವನ್ನು ಜಿಲ್ಲಾವಾರು, ಕ್ಷೇತ್ರವಾರು ಹಾಗೂ ಮತಗಟ್ಟೆಗಳಿಗೆ ಅನುಗುಣವಾಗಿ ವೀಕ್ಷಿಸಬಹುದು.
ಮತದಾರರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪರಿಶೀಲಿಸಿಕೊಳ್ಳುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡಿ ಮತದಾನ ಮಾಡಬಹುದು.
ಅಂತಿಮ ಮತದಾರರ ಪಟ್ಟಿ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ: https://ceo.karnataka.gov.in/FinalRoll_2023/