Thursday, December 19, 2024

ಮಾಗಡಿ ಜನತೆ ‘ಈ ಬಾರಿ ಬದಲಾವಣೆ’ ಬಯಸಿದ್ದಾರೆ : ಕೆ.ಆರ್ ಪ್ರಸಾದ್ ಗೌಡ

ಬೆಂಗಳೂರು : ಮಾಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಆರ್ ಪ್ರಸಾದ್ ಗೌಡ ಮಾಗಡಿ ಕ್ಷೇತ್ರದಲ್ಲಿ ಇಂದು ಅಬ್ಬರದ ಪ್ರಚಾರ ನಡೆಸಿದರು.

ತಾಲ್ಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರೆಗೌಡನದೊಡ್ಡಿ, ಅತ್ತಿಂಗೆರೆ, ಮತ್ತ, ಹೊಸದೊಡ್ಡಿ, ಮೇಗಲದೊಡ್ಡಿ, ಸಾವನದುರ್ಗ, ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಪ್ರಸಾದ್ ಗೌಡ ಅವರು, ಮಾಗಡಿ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಈ ಬಾರಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಗಳಾಗಿದೆ. ಎರಡು ಪಕ್ಷಗಳನ್ನು ಜನರು ನೋಡಿದ್ದಾರೆ. ಹಾಗಾಗಿ, ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸುತ್ತಾರೆ. ಬಾರಿ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ‘ಸೋತ್ರೆ ಸೀದಾ ಮನೆಗೆ’ ಹೋಗುತ್ತದೆ : ಸಿಎಂ ಬೊಮ್ಮಾಯಿ

ಪ್ರಸಾದ್ ಅಣ್ಣನೇ ಮಾಗಡಿ ಶಾಸಕ

ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿ ರೋಡ್ ಶೋ ನಡೆಸಿದ ಪ್ರಸಾದ್ ಗೌಡ ಗೆ ಎಲ್ಲಾ ಗ್ರಾಮಗಳಲ್ಲೂ ಅದ್ದೂರಿ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ ಪುಷ್ಪಾರ್ಚನೆ ಮಾಡಿ ಆರತಿ ಬೆಳಗುವ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡರು. ಈ ಮೂಲಕ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುವ ಭರವಸೆ ನೀಡಿದರು.

ಇದಕ್ಕೂ ಮುನ್ನ ತಾಳವಾಡಿ ಗ್ರಾಮದಲ್ಲಿ ಬಿಜೆಪಿ ಪ್ರಗತಿಪರ ಪ್ರಜಾ ಪ್ರಣಾಳಿಕೆ ಮತ್ತು ಜನನ್ನು ಉದ್ದೇಶಿಸಿ  ಕೆ.ಆರ್ ಪ್ರಸಾದ್ ಗೌಡ ಮಾತನಾಡಿದರು. ಈ ವೇಳೆ ನೆರೆದಿದ್ದ ಜನತೆ ಬೆಂಬಲ ಮತ್ತು ಆಶೀರ್ವಾದ ನೀಡುವ ಮೂಲಕ ಪ್ರಸಾದ್ ಅಣ್ಣ ಅವರೇ ಮಾಗಡಿಯ ಮುಂದಿನ ಶಾಸಕರು ಎಂದು ಘೋಷಣೆ ಕೂಗಿದರು.

RELATED ARTICLES

Related Articles

TRENDING ARTICLES