ಬೆಂಗಳೂರು : ಹೆಲಿಕಾಪ್ಟರ್ ಗೆ ರಣಹದ್ದು ಬಡಿದು ವಿಂಡೋ ಗಾಜು ಪುಡಿಪುಡಿಯಾದ ಘಟನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದರು.
ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿ ಮರಳಿದೆ. ಹೆಲಿಕಾಪ್ಟರ್ನತ್ತ ಮೂರು ಹದ್ದುಗಳು ಬಂದವು. ಎರಡು ಹದ್ದುಗಳು ಹೆಲಿಕಾಪ್ಟರ್ಗೆ ಡಿಕ್ಕಿಯಾಗೋದನ್ನು ಪೈಲಟ್ ತಪ್ಪಿಸಿದರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಹೆಲಿಕಾಪ್ಟರ್ ಟೇಕಾಫ್ ಆಗಿ 10 ನಿಮಿಷ ಆಗಿತ್ತು. ಹೊಸಕೋಟೆ ಬಳಿ ಹೆಲಿಕಾಪ್ಟರ್ ಹಾರಾಟದ ವೇಳೆ ಹದ್ದು ಡಿಕ್ಕಿ ಹೊಡೆಯಿತು. ಅದೃಷ್ಟವತಾಶ್ ಯಾವುದೇ ಅವಘಡ ಸಂಭವಿಸಿಲ್ಲ. ಹೆಲಿಕಾಫ್ಟರ್ ನಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ. ರಾಜ್ಯದ ಜನತೆ ಹಾಗೂ ದೇವರ ಅನುಗ್ರಹದಿಂದ ನಾನು ಪಾರಾಗಿದ್ದೇನೆ ಎಂದರು.
ಇದನ್ನೂ ಓದಿ : 15 ವರ್ಷದಿಂದ ‘ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡ್ತಿದೆ’ : ಸಮೃದ್ಧಿ ಮಂಜುನಾಥ್
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ಹೆಚ್‌ಎಎಲ್‌ನಿಂದ ಮುಳಬಾಗಿಲಿಗೆ ಡಿಕೆಶಿ ತೆರಳುತ್ತಿದ್ದರು. ಈ ವೇಳೆ ರಣಹದ್ದು ಬಡಿದಿದ್ದು, ಕಾಪ್ಟರ್‌ನ ವಿಂಡೋ ಗಾಜು ಪುಡಿಪುಡಿಯಾಗಿದೆ. ಆದ್ದರಿಂದ ಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.
ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದರು. ಬಳಿಕ, ಕೋಲಾರದ ಮುಳುಬಾಗಿಲಿಗೆ ಪ್ರಯಾಣ ಕೈಗೊಂಡರು. ಈ ವೇಳೆ ಅವಘಡ ಸಂಭವಿಸಿದೆ. ಹಾರಾಟ ವೇಳೆ ಹೆಲಿಕಾಪ್ಟರ್ ಮುಂಭಾಗದ ವಿಂಡೋ ಗಾಜು ಪುಡಿಪುಡಿಯಾಗಿದ್ದು, ತುರ್ತು ಭೂಸ್ಪರ್ಶವಾಗಿದೆ.