ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ದೇವರ ಮಳ್ಳೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡರ ಪರವಾಗಿ ಪತ್ನಿ ರಾಣಿ ರಾಮಚಂದ್ರಗೌಡ ಅವರು ಪ್ರಚಾರ ನಡೆಸಿದರು.
ಗ್ರಾಮದ ಮನೆ ಮನೆಗೂ ತೆರಳಿ ಪಕ್ಷದ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ ಮತಯಾಚನೆ ಮಾಡಿದರು. ಈ ಬಾರಿ ಬಿಜೆಪಿಯನ್ನು ಬಾರಿ ಬಹುಮತದೊಂದಿದೆ ಗೆಲ್ಲಿಸಬೇಕೆಂದು ವಿನಂತಿಸಿದರು. ಈ ವೇಳೆ ಸ್ಥಳೀಯ ಮುಖಂಡರಾದ ಬಾಲಕೃಷ್ಣ, ವೆಂಕಟೇಶ್ ಮತ್ತು ಆನಂದ್ ಇದ್ದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿ ಸೇವಾಸೌಧದಲ್ಲಿ ಗಂಗಾಪುರ, ರಪ್ಪರ್ಲಾ ಹಳ್ಳಿ ಮತ್ತು ರಾಚನಹಳ್ಳಿ ಗ್ರಾಮದ ಹಲವಾರು ಗ್ರಾಮಸ್ಥರು ಬಿಜೆಪಿಗೆ ಸೇರ್ಪಡೆಯಾದರು. ಜಿ.ಟಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಜನ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಸಹೋದರ ಸೀಕಲ್ ಆನಂದಗೌಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು.
ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ‘ಬಿಜೆಪಿ ಬಂದ್ರೆ ಅಭಿವೃದ್ಧಿ’ಗೆ ಆನೆಬಲ : ಸೀಕಲ್ ರಾಮಚಂದ್ರಗೌಡ
ಗಂಗಾಪುರದ ವೆಂಕಟೇಶ್, ರಾಮಾಂಜಿ, ಮಹಾದೇಶ್. ರಪ್ಪರಲಹಳ್ಳಿಯ ರಾಮಾಂಜಿ. ರಾಚನಹಳ್ಳಿಯ ಅಶ್ವಥಪ್ಪ, ವೆಂಕಟರಾಯಪ್ಪ, ಮುದ್ದಪ್ಪ, ಮೇಸ್ತ್ರಿ ವೆಂಕಟರಾಯಪ್ಪ ಅವರು ಸೇರಿದರು. ನೂತನವಾಗಿ ಸೇರಿದವರಿಗೆ ಬಿಜೆಪಿ ಶಾಲು, ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಶಿಡ್ಲಘಟ್ಟದ ಸಮಗ್ರ ಅಭಿವೃದ್ದಿ, ನವ ಶಿಡ್ಲಘಟ್ಟದ ನಿರ್ಮಾಣಕ್ಕೆ ಪಣ ತೊಟ್ಟಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಬಿಜೆಪಿಯ ಪರ ಮತ ಯಾಚನೆ ಕೆಲಸವನ್ನು ಮುಂದುವರಿಸಿದ್ದಾರೆ.