ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಈ ಪ್ರಣಾಳಿಕೆಯಲ್ಲಿ ಸ್ಯಾಂಡಲ್ ವುಡ್ ರಾಜರತ್ನ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಮೈಸೂರಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಲಾಯಿತು.
ಪ್ರಜಾ ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಈಗಾಗಲೇ ಬಜೆಟ್ನಲ್ಲೂ ಕೃಷಿಗೂ ಹೆಚ್ಚು ಆದ್ಯತೆ ನೀಡಿದ್ದೇವೆ. ಸಿರಿಧಾನ್ಯಗಳ ಉತ್ಪಾದನೆ, ಮೀನುಗಾರಿಕೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ತಿಳಿಸಿದರು.
ಜನರ ಹಿತದೃಷ್ಟಿಯನ್ನಿಕೊಟ್ಟುಕೊಂಡು ಪ್ರಣಾಳಿಕೆ ತಯಾರಿಸಿದ್ದೇವೆ. ಪ್ರಣಾಳಿಕೆ ರಾಜ್ಯ ಸರ್ಕಾರ ನಡೆಯುವ ದಿಕ್ಕನ್ನು ತೋರಿಸುತ್ತದೆ. ಸುಮಾರು 2 ವರ್ಷ ಕೊರೊನಾದಿಂದ ಆರ್ಥಿಕ ಕುಸಿತ ಆಯಿತು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ : ಬಿಜೆಪಿಗೆ ‘ಜನ ಸೇವೆಯೇ ರಾಷ್ಟ್ರಸೇವೆ’ : ಪ್ರಧಾನಿ ಮೋದಿ
ರೈತ ವರ್ಗಕ್ಕೆ 12 ಭರವಸೆ
200 ಮೀನು ಕೃಷಿ ಉತ್ಪಾದನ ಕೇಂದ್ರ
ಭಗೀರಥ ಶಪಥ ಯೋಜನೆಯಡಿ ಬಾಕಿ ಉಳಿದಿರುವ ನಿರಾವರಿ ಯೋಜನೆ ಪೂರ್ಣ
ಇಸ್ರೇಲ್ ಮಾದರಿ ಹನಿ ನೀರಾವರಿ ಯೋಜನೆ
30 ಸಾವಿರ ಕೋಟಿ ಮೊತ್ತದ K-ಅಗ್ರಿಫಂಡ್ ಯೋಜನೆ
ಕೃಷಿಕ ಬಂಧು ಯೋಜನೆಯಲ್ಲಿ ಗ್ರಾ.ಪಂ.ಗಳಲ್ಲಿ ಕಿರು ಶೀತಲೀಕರಣ ಸೌಲಭ್ಯ
APMC ಕೇಂದ್ರಗಳ ಆಧುನೀಕರಣ ಮತ್ತು ಡಿಜಿಟಲೀಕರಣ
5 ಹೊಸ ಕೃಷಿ ಉದ್ಯಮ ಕ್ಲಸ್ಟರ್, 3 ಆಹಾರ ಸಂಸ್ಕರಣ ಪಾರ್ಕ್ ಸ್ಥಾಪನೆ
ಹಾಲು ಉತ್ಪಾದಕರಿಗೆ ಪ್ರೊತ್ಸಾಹ ಧನ ಲೀಟರ್ಗೆ 5 ರಿಂದ 7 ರೂಪಾಯಿಗೆ ಹೆಚ್ಚಳ
ಸಿರಿಧಾನ್ಯ ಕೃಷಿಗೆ ಉತ್ತೇಜನಕ್ಕೆ ‘ಸಿರಿ ಅನ್ನದ ಮೂಲಕ ಶ್ರೀಸಂಪದ’ ಮಿಷನ್