Friday, November 22, 2024

ಅಶೋಕ್ ಜಯರಾಮ್ ಹೆಚ್ಚು ಮತಗಳಿಂದ ದಿಗ್ವಿಜಯ ಸಾಧಿಸಲಿದ್ದಾರೆ : ಸಚಿವ ಅಶ್ವತ್ಥನಾರಾಯಣ

ಮಂಡ್ಯ : ಬಿಜೆಪಿ ಅಭ್ಯರ್ಥಿ ಅಶೋಕ್‌ ಜಯರಾಮ್ ಅವರು ಹೆಚ್ಚು ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಬಿಜೆಪಿ ಅಭ್ಯರ್ಥಿಯಾಗಿ ಇಂದು ಅಶೋಕ್ ಜಯರಾಮ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಸಾಥ್ ನೀಡಿದ ಅಶ್ವತ್ಥನಾರಾಯಣ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ಈ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜನರು ಬದಲಾವಣೆಗಾಗಿ ತುಡಿಯುತ್ತಿದ್ದಾರೆ. ಮಂಡ್ಯದಲ್ಲಿ ಹೆಚ್ಚು ಸ್ಥಾನಗಳು ಬಿಜೆಪಿಗೆ ಒಲಿಯಲಿದೆ ಎಂದು ನುಡಿದಿದ್ದಾರೆ.

ಬಿಜೆಪಿಯಿಂದ ಮಂಡ್ಯ ಅಭಿವೃದ್ಧಿ

ಒಂದು ಕಾಲದಲ್ಲಿ ಇಡೀ ಭಾರತದಲ್ಲಿ ಪ್ರಖರ ಪ್ರಗತಿಗೆ ಹೆಸರಾಗಿದ್ದ ಮಂಡ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ದೆಸೆಯಿಂದ ಹಿಂದಕ್ಕೆ ಹೋಗುತ್ತಿದೆ. ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮಂಡ್ಯ ‘ಜೆಡಿಎಸ್ ಭದ್ರಕೋಟೆ’ ಅನ್ನೋದು ಹಾಸ್ಯಾಸ್ಪದ : ಸುಮಲತಾ ಟಕ್ಕರ್

ಮೈಶುಗರ್ ಪುನಾರಂಭಿಸಿದ್ದು ಬಿಜೆಪಿ

ಹಿಂದೆ ಕಾಂಗ್ರೆಸ್ ಸರ್ಕಾಕಾರ ಮೈಶುಗರ್ ಕಾರ್ಖಾನೆಗೆ ಬೀಗ ಹಾಕಿತ್ತು. ಜೆಡಿಎಸ್ ಕೂಡ ಈ ಕಾರ್ಖಾನೆಯನ್ನು ಪುನಾರಂಭ ಮಾಡಲು ಪ್ರಯತ್ನಿಸಲಿಲ್ಲ. ಆದರೆ, ಬಿಜೆಪಿ ಸರ್ಕಾರ ಮಾತ್ರ ಈ ವಿಚಾರದಲ್ಲಿ ದೃಢ ನಿರ್ಧಾರ ಮಾಡಿತು. ಮೈಶುಗರ್ ಕಾರ್ಖಾನೆಯ ಪುನಾರಂಭ ಮಾಡಿತು. ಇದರಿಂದ ಜಿಲ್ಲೆಯ ರೈತರಿಗೆ ಅಪಾರ ಅನುಕೂಲವಾಗಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ರೈತರು, ಮಹಿಳೆಯರು, ಯುವಜನರು, ದಲಿತರು ಹೀಗೆ ಎಲ್ಲರನ್ನೂ ಸಬಲೀಕರಣಗೊಳಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟು ಸಲ ಜನಾದೇಶ ಸಿಕ್ಕಿದರೂ ಮೊಸಳೆ ಕಣ್ಣೀರು ಸುರಿಸುತ್ತ ವಂಚಿಸಿವೆ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES