Friday, November 22, 2024

ಮಂಡ್ಯ ‘ಜೆಡಿಎಸ್ ಭದ್ರಕೋಟೆ’ ಅನ್ನೋದು ಹಾಸ್ಯಾಸ್ಪದ : ಸುಮಲತಾ ಟಕ್ಕರ್

ಬೆಂಗಳೂರು : ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ ಎನ್ನುವುದು ಹಾಸ್ಯಾಸ್ಪದ ಎಂದು ಸಂಸದೆ ಸುಮಲತಾ ಅಂಬರೀಶ್ ದಳಪತಿಗಳ ವಿರುದ್ಧ ಗುಡುಗಿದ್ದಾರೆ.

ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಸುಮಲತಾ ಅವರು, ಎಂತೆಂತವರೊ ಎಲ್ಲಿಗೆ ಹೋಗಿದ್ದಾರೆ ಅಂತ ಇತಿಹಾಸ ನೋಡಿದ್ರೆ ತಿಳಿಯುತ್ತದೆ. ಈ ಬಾರಿ ಮಂಡ್ಯದಲ್ಲಿ ಅಶೋಕ್ ಜಯರಾಮ್ ಗೆ ಜನ ಆರ್ಶೀವಾದ ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದಾರೆ.

ನನ್ನ ಟಾರ್ಗೆಟ್ ಭ್ರಷ್ಟ ರಾಜಕಾರಣದ ವಿರುದ್ಧವೇ ಹೊರತು ಬೇರೆಯದ್ದಲ್ಲ. ರಾಜಕಾರಣದಲ್ಲಿ ಇದ್ರು ಒಂದಿಷ್ಟು ಸಂಸ್ಕಾರ ಮೌಲ್ಯಯುತ ರಾಜಕಾರಣ ಮಾಡ್ಬೇಕು. ಶಾಸಕ ಪುಟ್ಟರಾಜು ಅವರ ವಿರುದ್ಧ ಸಿಬಿಐ ಪ್ರಕರಣವಿದೆ. ಭ್ರಷ್ಟರಾಜಕಾರಣದಿಂದ ದೂರ ಇಡಬೇಕಾಗಿದೆ. ಜೇಬಲ್ಲಿ ಕೆಂಡವನ್ನು ಇಡ್ಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುವುದು ಇವರು ಎಂದು ಕೆಂಡಾಮಂಡಲವಾಗಿದ್ದಾರೆ.

ಇದನ್ನೂ ಓದಿ : ಅಶೋಕ್ ಜಯರಾಮ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ‘ಕೈ’ ನಾಯಕರು

ಅವ್ರು ಸಿಎಂ ಆಗುವುದಕ್ಕೆ ಕಾರಣ ಯಾರು?

ಆ ವ್ಯಕ್ತಿ(ಸಂಸದೆ ಸುಮಲತಾ ಅಂಬರೀಶ್)ಯಿಂದ ಏನು ಪ್ರಯೋಜನವಿಲ್ಲ ಎಂಬ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇವರು 2018ರಲ್ಲಿ ಮುಖ್ಯಮಂತ್ರಿ ಆಗುವುದಕ್ಕೆ ಕಾರಣ ಯಾರು? ಕಾಂಗ್ರೆಸ್ ನಲ್ಲಿ ಅಪಮಾನ ಆಗಿದಕ್ಕೆ ಅಂಬರೀಶ್ ಅಭಿಮಾನಿಗಳು ತಕ್ಕ ಶಾಸ್ತಿ ಮಾಡಿದ್ದರು. ಹಾಗಾಗಿಯೇ 2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು ಎಂದು ಕುಟುಕಿದ್ದಾರೆ.

There is no Achievement

ಮುಖ್ಯಮಂತ್ರಿ ಆದ ಮೊದಲನೇ ದಿನವೇ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋದರು. ಮಂಡ್ಯ ಜಿಲ್ಲೆಗೆ ಈ ನಾಯಕರ ಕೊಡುಗೆ ಏನಿದೆ ಎಂದು ತೋರಿಸಲಿ. ‘There is no Achievement’ ಎಂದು ಸಂಸದೆ ಸುಮಲತಾ ಗುಡುಗಿದ್ದಾರೆ.

ನನ್ನ ಮಗ ಬೇರೆ ಅಲ್ಲ, ಜಯರಾಮ್ ಬೇರೆ ಅಲ್ಲ

ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅವರಿಗೆ ಜೆಡಿಎಸ್ ಪಕ್ಷದಿಂದ ಅನ್ಯಾಯ ಆಗಿದೆ. ನನ್ನ ಮಗ ಬೇರೆ ಅಲ್ಲ ಎಸ್.ಟಿ ಜಯರಾಮ್ ಮಗ ಬೇರೆ ಅಲ್ಲ. ಆದರೆ, ಕುಮಾರಸ್ವಾಮಿಯವರು ಏನು ಮಾಡಿದ್ರು? ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES