ಈಗಲ್ಲೇ ಬೇಸಿಗೆ ಶುರುವಾಗಿದೆ. ಈ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಇನ್ನೂ ಮಾರುಕಟ್ಟೆಗೆ ಋತುವಿನ ತರಕಾರಿ ಈಗಲ್ಲೇ ಲಗ್ಗೆಇಟ್ಟಿದೆ. ಈಗ ಎಲ್ಲ ಕಾಲದಲ್ಲೂ ಹೀರೆಕಾಯಿ ಸಿಗುತ್ತದೆ. ಈ ಋತುವಿನಲ್ಲಿ ನೀವು ಹೀರೆಕಾಯಿ ತಿಂದಿಲ್ಲವೆಂದ್ರೆ ಈಗ್ಲೇ ಸೇವನೆ ಶುರು ಮಾಡಿ.
ಹೀರೆಕಾಯಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳು
ನಾವು ಹೀರೆಕಾಯಿಯಲ್ಲಿ ನಾನಾ ರೀತಿಯ ಆಹಾರ ತಯಾರಿಸಬಹುದು. ಹೀರೆಕಾಯಿ ಸಾಂಬಾರ್, ತಂಬುಳಿ, ಪಲ್ಯ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು.
ಹೌದು,ಹೀರೆಕಾಯಿ (Ridge Gourd) ಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಎ, ಬಿ, ಸಿ ಮಾತ್ರವಲ್ಲದೆ ಕೆಲವು ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿ ಇರುತ್ತದೆ. ಇದರಿಂದ ಆರೋಗ್ಯ ವೃದ್ದಿಗೆ ಹೀರೆಕಾಯಿ ಸಹಾಯಕ.
ಆಗಿದ್ದರೆ, ಹೀರೆಕಾಯಿ ಸೇರಿಸೋದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ತಿಳಿಯೋಣ ಬನ್ನಿ…
ಹೀರೆಕಾಯಿ ಸೇವನೆಯಿಂದ ಸಿಗುವ ಪ್ರಯೋಜನ
- ಹೀರೆಕಾಯಿ ಸೇವನೆಯಿಂದ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ.
- ಅನಿಮಿಯ ಸಮಸ್ಯೆಗೆ ರಾಮಬಾಣ
- ದೇಹದ ತೂಕ ಕಡಿಮೆ ಮಾಡಲು ಸಹಾಯಕ
- ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ.
- ಲಿವರ್ ಆರೋಗ್ಯ ರಕ್ಷಣೆ ಮಾಡುತ್ತದೆ.
- ಮೆದುಳಿ (Brain) ನ ಆರೋಗ್ಯ (Health) ಕ್ಕೆ ಒಳ್ಳೆಯದು
- ಚರ್ಮದ ಆರೋಗ್ಯಕ್ಕೆ ಒಳ್ಳೆಯದು
- ತಲೆನೋವಿನ (Headache) ಸಮಸ್ಯೆಗೆ ಮುಕ್ತಿ