ಬೆಂಗಳೂರು : ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿರುವ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಸುದೀಪ್ ಅವರ (ಸಮುದಾಯದ ಸ್ವಾಮೀಜಿ) ಸ್ವಾಮೀಜಿಗಳು ಎರಡು ತಿಂಗಳು ಸತ್ಯಾಗ್ರಹ ಕೂತಿದ್ದರು. ಆಗ ಯಾಕೆ ಸ್ವಾಮೀಜಿಗಳಿಗೆ ಬೆಂಬಲ ಕೊಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.
ಮೀಸಲಾತಿ ಕೊಡಿಸಬಹುದಿತ್ತಲ್ವಾ?
ಮುಖ್ಯಮಂತ್ರಿ ಬೊಮ್ಮಾಯಿ ಮಾಮಾ ಜೊತೆ ಮಾತಾಡ್ತೀನಿ ಅಂತಾ ಸುದೀಪ್ ಹೇಳಬಹುದಿತ್ತಲ್ವಾ? ಅವ್ರ ಮಾಮ ಜೊತೆ ಮಾತಾಡಿ ಎಸ್ಸಿ-ಎಸ್ಟಿಯವರಿಗೆ ಮೀಸಲಾತಿ ಕೊಡಿಸಬಹುದಿತ್ತಲ್ವಾ? ಈಗ ಬಿಜೆಪಿ ಪರ ಪ್ರಚಾರ ಮಾಡುವ ಉದ್ದೇಶ ಏನಿದೆ ಎಂದು ಪ್ರಿಯಾಂಕ್ ಖರ್ಗೆ ಅಸಮಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ : ಕಿಚ್ಚ ಸುದೀಪ್ ಗೆ ಟಾಂಗ್ ಕೊಟ್ಟ ಪ್ರಕಾಶ್ ರೈ : ನೋಡ್ರಪ್ಪ.. ಮಾಮ ಹೆಲ್ಪ್ ಮಾಡಿದ್ರೆ 30% ಕೊಡಿ
ಎಲ್ಲಾ ಪಾರ್ಟಿಗಳಲ್ಲೂ ಅಭಿಮಾನಿಗಳು ಇದ್ದಾರೆ
ಬಾಲಿವುಡ್ ವರ್ಸಸ್ ಸ್ಯಾಂಡಲ್ ವುಡ್ ಎಂದಾಗ ನಟ ಸುದೀಪ್ ಕನ್ನಡ ಅಸ್ಮಿತೆ ಪರ ನಿಂತಿದ್ದರು. ಇದು 40% ಬಿಜೆಪಿ ಸರ್ಕಾರ. ಸುದೀಪ್ ಅವರ ಸಿನಿಮಾಗಳನ್ನು ಕೇವಲ ಬಿಜೆಪಿಯವ್ರು ಮಾತ್ರ ನೋಡ್ತಾರಾ? ಅವ್ರ ಅಭಿಮಾನಿಗಳು ಎಲ್ಲಾ ಪಾರ್ಟಿಗಳಲ್ಲೂ ಇದ್ದಾರೆ ಎಂದು ಕುಟುಕಿದ್ದಾರೆ.
ಸಿಎಂ ಬೊಮ್ಮಾಯಿ ಅವರಿಗೆ, ಬೆಂಬಲ ಸೂಚಿಸಿರುವ ನಟ ಕಿಚ್ಚ ಸುದೀಪ್, ‘ನಾನು ಬೊಮ್ಮಾಯಿ ಮಾಮನ ಪರ ಪ್ರಚಾರ ಮಾಡುತ್ತೇನೆ’ ಎಂದಿದ್ದರು. ಇದಕ್ಕೆ ವಿಪಕ್ಷಗಳು ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಸಹ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.