Saturday, November 23, 2024

ಪಂಚರತ್ನ ಸಮಾರೋಪದಲ್ಲಿ ದೇವೇಗೌಡ್ರ ಭಾವುಕ ನುಡಿ

ಬೆಂಗಳೂರು : ಜೆಡಿಎಸ್ ಪಂಚರತ್ನ ಯಾತ್ರೆ ಅದ್ಧೂರಿ ಸಮಾರೋಪ ಸಮಾರಂಭ ಮೈಸೂರಿನ ಚಾಮುಂಡೇಶ್ವರಿ ತಪ್ಪಲಿನಲ್ಲಿ ಆರಂಭವಾಗಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸಮಾರಂಭವನ್ನು ಉದ್ಘಾಟಿಸಿ ಭಾವುಕವಾಗಿ ಮಾತನಾಡಿದ್ದಾರೆ.

ನಾನೊಬ್ಬ ರೈತನ ಮಗ, ನೀವೂ ರೈತನ ಮಕ್ಕಳು. ದೇವರ ಕೃಪೆಯಿಂದ ನಾನು ನಿಮ್ಮ ಮುಂದೆ ಬಂದಿದ್ದೇನೆ. ಮಾಜಿ ಸಿಎಂ ಕುಮಾರಸ್ವಾಮಿ, ಆಡಳಿತದ ದಿನಗಳನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

ಜನರ ಮುಂದೆ ನಾನು ಮತಭಿಕ್ಷೆ ಕೇಳಿದ್ದೇನೆ. ನಾನು ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ನಾನು ಯಾವತ್ತೂ ಸಹ ಅಧಿಕಾರದ ಸುಖ ಎಂದೂ ಕಂಡವನಲ್ಲ. ನಾನು ಜನರ ಹಿತಕ್ಕಾಗಿ ದುಡಿದಿದ್ದೇನೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲಿಲ್ಲ. ಹಾಗಾಗಿಯೇ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದೆ ಎಂದು ದೇವೇಗೌಡರು ಹೇಳಿದ್ದಾರೆ.

ಇದನ್ನೂ ಓದಿ : 15 ದಿನಗಳಿಂದ ಹಾಸನದತ್ತ ತಲೆಹಾಕದ ಭವಾನಿ : ರೇವಣ್ಣ ಮೂಲಕ ಹೊಸ ದಾಳ?

ಅಂಥಾ ಹುಂಬತನ ನನಗೆ ಇಲ್ಲ

ನಾನು ರೈತರ ಹಕ್ಕಿಗಾಗಿ ಹಗಲು ರಾತ್ರಿ ದುಡಿದಿದ್ದೇನೆ. ಮಹಿಳೆಯರ ಹಕ್ಕಿಗಾಗಿ ಮೊದಲು ಪ್ರಸ್ತಾಪ ಮಾಡಿದ್ದೇ ನಾನು. ನಂತರದ ಸರ್ಕಾರಗಳು ಅಷ್ಟಾಗಿ ಕಳಕಳಿ ವಹಿಸಲಿಲ್ಲ. ನಾನೇ ಎಲ್ಲವನ್ನೂ ಮಾಡಿದ್ದೇನೆಂದು ಹೇಳುವುದಿಲ್ಲ. ಅಂಥಾ ಹುಂಬತನ ನನಗೆ ಇಲ್ಲ. ನಾನೆಂದೂ ಇತರರಂತೆ ಕೀಳು ಮಟ್ಟಕ್ಕೆ ಇಳಿದಿಲ್ಲ. ನಾನೊಬ್ಬ ಕನ್ನಡಿಗ ಎಂಬುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

ಎಚ್.ಡಿ ಕುಮಾರಸ್ವಾಮಿ ಅವರು ಆರೋಗ್ಯವನ್ನು ಲೆಕ್ಕಿಸದೆ ರಾಜ್ಯಾದ್ಯಂತ ಪಂಚರತ್ನ ಯಾತ್ರೆಯ ಮೂಲಕ ಸಂಚಾರ ಮಾಡಿದ್ದಾರೆ. ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ದೇವೇಗೌಡರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES