Thursday, December 19, 2024

ಸಿಎಂ ಬೊಮ್ಮಾಯಿ ಪರ ಯಡಿಯೂರಪ್ಪ ಬ್ಯಾಟಿಂಗ್

ಬೆಂಗಳೂರು : ಮುಂದಿನ ಸಿಎಂ ಯಾರು? ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಬ್ಯಾಟ್ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಸವರಾಜ್ ಬೊಮ್ಮಾಯಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಮಾಜಿ ಸಿಎಂ ಬಿಎಸ್‌ವೈ ಹೇಳಿದ್ದಾರೆ.

ಮತ್ತೊಮ್ಮೆ ನಾನೇ ಸಿಎಂ ಎಂದು ಬೊಮ್ಮಾಯಿ ಹೇಳಿರುವುದರಲ್ಲಿ ತಪ್ಪಿಲ್ಲ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಬೊಮ್ಮಾಯಿ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಬಿಎಸ್‌ವೈ ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿಗೆ ಬಿಗ್ ಶಾಕ್ : ಕಾಂಗ್ರೆಸ್ ಸೇರಿದ ಹಿರಿಯ ನಾಯಕ

ಬಿಎಸ್ ವೈ ರಾಜಿ ಸಂದಾನ ಯಶಸ್ವಿ

ಇನ್ನೂ ಅಸಮಾಧಾನಿತರ ಜೊತೆ ಬಿ.ಎಸ್ ಯಡಿಯೂರಪ್ಪ ರಾಜಿ ಸಂದಾನ ಯಶಸ್ವಿಯಾಗಿದೆ. ಸಚಿವ ನಾರಾಯಣ ಗೌಡ, ಶಾಸಕಿ ಕೆ. ಪೂರ್ಣಿಮಾ ಜೊತೆ ಚರ್ಚೆ ನಡೆಸಿ, ಬಿಜೆಪಿ ಪಕ್ಷ ಬಿಡದಂತೆ ಸಂದಾನ ಬಿಎಸ್ ವೈ ನಡೆಸಿದ್ದಾರೆ.

ಸಚಿವ ನಾರಾಯಣ ಗೌಡರ ಜತೆಗೂ ಮಾತಾಡಿದೀನಿ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಜತೆಗೂ ಮಾತಾಡಿದೀನಿ. ಈಗಿರುವ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಸಂತೋಷವಾಗಿ ಬಿಜೆಪಿಯಲ್ಲೇ ಇದ್ದು ಕೆಲಸ ಮಾಡೋದಾಗಿ ಹೇಳಿದಾರೆ ಎಂದು ಬಿಎಸ್ ವೈ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES