Monday, November 25, 2024

ನಿತ್ಯಾನಂದ ಸ್ವಾಮಿಯ ಕೈಲಾಸ ‘ಗಡಿ ರಹಿತ ದೇಶ’ವಂತೆ

ಬೆಂಗಳೂರು : ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಸ್ಥಾಪಿಸಿರುವ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ದೇಶದ ಬಗ್ಗೆ ಅಲ್ಲಿನ ಪ್ರತಿನಿಧಿಗಳು ಅಧಿಕೃತ ಟ್ವಿಟರ್ ಹೇಳಿಕೆ ನೀಡಿದ್ದಾರೆ.

‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ರಾಷ್ಟ್ರವು ಪ್ರಾಚೀನ ಪ್ರಬುದ್ಧ ಪುನರುಜ್ಜೀವನಗೊಂಡ ಹಿಂದೂ ನಾಗರಿಕತ್ವದ ದೇಶವಾಗಿದೆ. ಅದು ಗಡಿ ರಹಿತ, ಸೇವೆ ಆಧಾರಿತ ರಾಷ್ಟ್ರವಾಗಿದೆ. ಅನೇಕ ಸಂಸ್ಥೆಗಳು ಮತ್ತು ಎನ್ ಜಿಓಗಳು ಮತ್ತು ಮಠಗಳಿಂದ ದೇಶ ನಿರ್ವಹಣೆ ಆಗುತ್ತಿದೆ.

ಶಾಂತಿಯು ‘ಕೈಲಾಸ’ದ ಉದ್ದೇಶ

ಲಿಂಗ, ಜನಾಂಗ, ರಾಷ್ಟ್ರೀಯತೆ, ಬಣ್ಣ ಮತ್ತು ಜಾತಿಯ ಭೇದ-ಭಾವವಿಲ್ಲದೆ ಜಾಗತಿಕ ಶಾಂತಿಯು ‘ಕೈಲಾಸ’ದ ಉದ್ದೇಶವಾಗಿದೆ. ಏಕತೆ ಆಧಾರದಲ್ಲಿ ಮತ್ತು ಎಲ್ಲರಿಗೂ ಜ್ಞಾನೋದಯ ಎಂಬ ಪರಿಕಲ್ಪನೆಯೊಂದಿಗೆ ದೇಶ ಸ್ಥಾಪನೆಯಾಗಿದೆ ಎಂದು ಕೈಲಾಸದ ಪ್ರತಿನಿಧಿಗಳು ಅಧಿಕೃತ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಕೈಲಾಸ ಎನ್ ಜಿಓ ಪ್ರತಿನಿಧಿಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಭಾಗವಹಿಸಿದ್ದರು. 2020ರ ಡಿಸೆಂಬರ್​​ನಲ್ಲಿ ಈಕ್ವೆಡಾರ್ ಕರಾವಳಿಯ ದ್ವೀಪವೊಂದಕ್ಕೆ ಸ್ವಾಮಿ ನಿತ್ಯಾನಂದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ನಾಮಕರಣ ಮಾಡಿದ್ದು, ಸ್ವತಂತ್ರ ದೇಶ ಆಗಿಸಲು ಹೊರಟಿದ್ದಾರೆ.

ದಕ್ಷಿಣ ಅಮೆರಿಕಾದ ಈಕ್ವೆಡಾರ್‌ ಬಳಿಯಲ್ಲಿ ದ್ವೀಪವೊಂದನ್ನು ಖರೀದಿಸಿ ಕೈಲಾಸ ಎಂಬ ದೇಶ ನಿರ್ಮಿಸಿರುವ ನಿತ್ಯಾನಂದ ಇದೀಗ ಮತ್ತೊಂದು ಘೋಷಣೆ ಮಾಡಿದ್ದಾರೆ. ನಮ್ಮ ದೇಶಕ್ಕೆ ಗಡಿಯೇ ಇಲ್ಲ. ನಿತ್ಯಾನಂದನೇ ಹಿಂದೂ ಧರ್ಮದ ಪ್ರಧಾನ ಗುರು ಎಂದು ಘೋಷಣೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES