Saturday, November 23, 2024

ಫೇಡಾ ನಗರಿಯಲ್ಲಿ ವಿಪಕ್ಷಗಳಿಗೆ ಪ್ರಧಾನಿ ಮೋದಿ ಟಾಂಗ್

ಬೆಂಗಳೂರು : ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿ(IIT) ಕ್ಯಾಂಪಸ್​​ ಲೋಕಾರ್ಪಣೆಗೊಳಿಸಿದ ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ವಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಧಾರವಾಡದ ಐಐಟಿ ಕ್ಯಾಮಪಸ್ ಗೆ ನಾಲ್ಕು ವರ್ಷಗಳ ಹಿಂದೆ ನಾನೇ ಶಿಲಾನ್ಯಾಸ ನೆರವೇರಿಸಿದ್ದೆನು. ಆದರೆ, ಇದನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ಡಬಲ್ ಎಂಜಿನ್ ಸರ್ಕಾರದ ವೇಗದ ಕಾರ್ಯವೈಖರಿಗೆ ಇದೆ ಸಾಕ್ಷಿ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಆಡಳಿತದಲ್ಲಿದ್ದ ಸರ್ಕಾರಗಳು ಶಿಲಾನ್ಯಾಸ ಮಾತ್ರ ಮಾಡುತ್ತಿದ್ದವು. ಆದರೆ, ಅವುಗಳ ಉದ್ಘಾಟನೆ ಇನ್ನಾವುದೋ ಸರ್ಕಾರಗಳಲ್ಲಿ ನೆರವೇರುತ್ತಿತ್ತು. ಆದರೆ, ಈಗ ಕಾಲ ಸಂಪೂರ್ವ ಬದಲಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಮೋದಿ ಸಮಾಧಿ ನಿರ್ಮಿಸಲು ಪ್ಲಾನ್

9 ವರ್ಷಗಳ ಹಿಂದೆ ದೇಶದಲ್ಲಿ ಉತ್ತಮ ರಸ್ತೆಗಳು ಇರಲಿಲ್ಲ. ಈಗ ಉತ್ತಮ ರಸ್ತೆ, ಆರೋಗ್ಯ ಸೇವೆ ನೀಡಲಾಗುತ್ತುದೆ. ರಸ್ತೆ, ಹೆದ್ದಾರಿ, ಏರ್​ಪೋರ್ಟ್​ಗಳು ಅಭಿವೃದ್ಧಿ ಆಗುತ್ತಿದೆ. ಕಳೆದ 9 ವರ್ಷದಿಂದ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಆಗಿದೆ. ಬಡ, ಮಧ್ಯಮ ವರ್ಗದ ಜನರ ಜೀವನ ಸುಧಾರಣೆ ಆಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಧಾರವಾಡ ಭಾರತದ ಪ್ರತಿಬಿಂಬ

ಕರ್ನಾಟಕದ ಪಟ್ಟಣ್ಣ, ಹಳ್ಳಿಗಳ ಅಭಿವೃದ್ಧಿಗೆ ಶ್ರಮವಹಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿ ಆಗಲಿದೆ. ಧಾರವಾಡದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಲಿದೆ. ಧಾರವಾಡ ಕೇವಲ ಗೇಟ್​ ಅಲ್ಲ. ಕರ್ನಾಟಕದ ಧಾರವಾಡ ಭಾರತದ ಪ್ರತಿಬಿಂಬ. ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಇದೇ ವೇಳೆ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES