ಬೆಂಗಳೂರು : ಮಂಡ್ಯ ಪಕ್ಷೇತರ ಸಂಸದೆ ‘ಸ್ವಾಭಿಮಾನಿ’ ಸುಮಲತಾ ಅಂಬರೀಶ್ ಅವರು ರಾಜಕೀಯವಾಗಿ ತಮ್ಮ ಜಾಣ ನಡೆಯನ್ನು ಮುಂದುವರಿಸಿದ್ದಾರೆ.
ಹೌದು, ಸುಮಲತಾ ಜಾಣ ನಡೆ ಇಟ್ಟಿದ್ದಾರೆ ಎಂದು ರಾಜಕೀಯ ವಿಶ್ಲೇಷಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ, ಬಿಜೆಪಿ ಸೇರ್ಪಡೆ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಇದರ ಹಿಂದೆ ಕಾನೂನು ಪ್ರಕ್ರಿಯೆ ಅಡಗಿದೆ ಎಂದು ಹೇಳಲಾಗುತ್ತಿದೆ.
ಕಾನೂನು ತೊಡಕಾಗುತ್ತದೆ!
ಪಕ್ಷೇತರ ಸಂಸದರಾಗಿ ಆಯ್ಕೆಯಾದ 6 ತಿಂಗಳ ಒಳಗೆ ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗಬಹುದು. ಅದಾದ ಬಳಿಕ ಬೇರೆ ಪಕ್ಷ ಸೇರ್ಪಡೆಯಾದರೆ ಅನರ್ಹತೆಯ ಕಾನೂನು ತೊಡಕಾಗುತ್ತದೆ. ಹೀಗಾಗಿ ಸುಮಲತಾ ಈ ನಡೆ ಅನುಸರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯಲ್ಲಿ ಹಿರಿಯರು : ಯಾರ್ಯಾರು ಇದಾರೆ?
ಜೆಡಿಎಸ್-ಕಾಂಗ್ರೆಸ್ ಗೆ ಟಾಂಗ್
ಸಂಸದೆ ಸುಮಲತಾ ಅವರು ಇದೇ ವೇಲೆ ಪರೋಕ್ಷವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ತಮ್ಮ ವಿರುದ್ಧ ಅಭ್ಯರ್ಥಿ ಹಾಕಿದ್ದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.
ಅಲ್ಲದೆ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ನೇರವಾಗಿಗೆ ತಿರುಗೇಟು ಕೊಟ್ಟಿದ್ದಾರೆ. ತನ್ನದೇ ರಾಜಕೀಯ ಭದ್ರಕೋಟೆ ಎಂದುಕೊಂಡಿರುವ ಪಕ್ಷ, ಬೇರೊಂದು ಪಕ್ಷದ ಜೊತೆ ಮೈತ್ರಿ ಸಾಧಿಸಿದರೂ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.