Friday, November 22, 2024

ಶಾಕಿಂಗ್: ನಟಿ ಖುಷ್ಬೂ ಸುಂದರ್ ಮೇಲೆ ಅಪ್ಪನಿಂದಲೇ ಲೈಂಗಿಕ ದೌರ್ಜನ್ಯ..!

ಬೆಂಗಳೂರು : ಬಹುಭಾಷಾ ನಟಿ ಖುಷ್ಬೂ ಸುಂದರ್ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಬಾಲ್ಯದಲ್ಲಿ ತನ್ನ ಅಪ್ಪನಿಂದಲೇ ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದೆ ಎಂದು ಖುಷ್ಬೂ ಹೇಳಿಕೆ ನೀಡಿದ್ದಾರೆ.

ಚಿತ್ರರಂಗಕ್ಕಿಂತ ರಾಜಕೀಯದಲ್ಲಿ ನಟಿ ಖುಷ್ಬೂ ಸುಂದರ್ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಅವರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದರ ಜೊತೆ ಅನೇಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಬರ್ಖಾ ದತ್ ಜೊತೆಗೆ ಮಾತನಾಡಿದ ಖುಷ್ಬೂ ಅವರು ಎಳೆಎಳೆಯಾಗಿ ತಮ್ಮ ಬಾಲ್ಯದ ದಿನಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಸ್ವತಃ ತಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂಬ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಶಾರುಖ್ ಖಾನ್ ಪತ್ನಿ ಗೌರಿ ವಿರುದ್ಧ ಎಫ್ ಐಆರ್

ಒಬ್ಬಳೇ ಮಗಳಿಗೆ ಲೈಂಗಿಕ ಕಿರುಕುಳ

ಮಗುವಿನ ಮೇಲೆ ದೌರ್ಜನ್ಯ ಆದರೆ ಆ ಗಾಯ ಜೀವನ ಪರ್ಯಂತ ಹಾಗೆಯೇ ಇರುತ್ತದೆ. ಅದು ಹುಡುಗಿ ಆಗಿರಬಹುದು, ಹುಡುಗನೇ ಆಗಿರಬಹುದು. ನನ್ನ ತಾಯಿ ಸಾಕಷ್ಟು ನಿಂದನೆಗೆ ಒಳಗಾಗುತ್ತಿದ್ದರು. ತನ್ನ ಹೆಂಡತಿ ಹಾಗೂ ಮಕ್ಕಳನ್ನು ಹೊಡೆಯುವುದು, ಏಕೈಕ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆ ವ್ಯಕ್ತಿ (ತಂದೆ) ಭಾವಿಸಿದ್ದ ಎಂದು ತಿಳಿಸಿದ್ದಾರೆ.

8 ವರ್ಷದಲ್ಲಿದ್ದಾಗ ಲೈಂಗಿಕ ದೌರ್ಜನ್ಯ

ಮುಂದುವರಿದು ಮಾತನಾಡಿರುವ ಖುಷ್ಬೂ, ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದಾಗ ನನಗೆ ಕೇವಲ 8 ವರ್ಷ ವಯಸ್ಸು ಆಗಿತ್ತು. 15 ವರ್ಷ ತುಂಬಿದ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿತೆ ಎಂದು ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES