ಬೆಂಗಳೂರು : ಭಾರತ ಹಾಗೂ ಆಸಿಸ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಬದ್ಧತೆಗೆ ಕ್ರಿಕೆಟ್ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂದೋರ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸಿಸ್ ಆಟಗಾರ ಮಿಚೆಲ್ ಸ್ಟಾರ್ಕ್ ಅವರ ಎಡಗೈ ಬೆರಳಿನಿಂದ ರಕ್ತ ಸುರಿಯುತ್ತಿತ್ತು. ಈ ವೇಳೆ ತಮ್ಮ ಪ್ಯಾಂಟ್ ಮೇಲೆ ಒರೆಸಿಕೊಂಡು ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮುಂದುವರಿಸಿದ್ದರು.
ಮಿಚೆಲ್ ಸ್ಟಾರ್ಕ್ ಅವರು ಗಾಯದ ಸಮಸ್ಯೆಯಿಂದ ಕಳೆದ ಡಿಸೆಂಬರ್ ತಿಂಗಳಿನಿಂದ ಆಸಿಸ್ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ, ಭಾರತ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಸಂಪೂರ್ಣ ಫಿಟ್ ಆಗದಿದ್ದರು ಸ್ಟಾರ್ಕ್ ಅವರು ಮೂರನೇ ಟೆಸ್ಟ್ ಪಂದ ಆಡುತ್ತಿದ್ದಾರೆ. ಬೌಲಿಂಗ್ ಮಾಡುವ ವೇಳೆ ಬೆರಳಿನಿಂದ ರಕ್ತ ಸೋರುತ್ತಿದ್ದರೂ ಬೌಲಿಂಗ್ ಮುಂದುವರಿಸಿ ಬದ್ಧತೆ ಪ್ರದರ್ಶಿಸಿದ್ದಾರೆ.
163 ರನ್ ಗಳಿಗೆ ಭಾರತ ಸರ್ವಪತನ
ಆಸಿಸ್ ವಿರುದ್ಧದ ಎರಡನೇ ಇನ್ನಿಂಗ್ಸ್ ನಲ್ಲೂ ಟೀಂ ಇಂಡಿಯಾ ಆಟಗಾರದ್ದು ಹೀನಾಯ ಪ್ರದರ್ಶನ. ಹೀಗಾಗಿ, ಆಸಿಸ್ ಬೌಲರ್ ಗಳಿಗೆ ಎದೆಯೊಡ್ಡಲಾರದೆ 163 ರನ್ ಗಳಿಗೆ ಆಲೌಟ್ ಆಗಿದೆ. ಹೀಗಾಗಿ, ಆಸಿಸ್ ಗೆಲುವಿಗೆ ಕೇವಲ 76 ರನ್ ಮಾತ್ರ ಬೇಕಿದೆ.
ಪೂಜಾರ ಅರ್ಧಶತಕದ ಆಸರೆ
ಭಾರತದ ಪರ ಪೂಜಾರ ಮಾತ್ರ ಅರ್ಧಶತಕ(59) ಬಾರಿಸಿ ತಂಡಕ್ಕೆ ಆಸರೆಯಾದರು. ಉಳಿದವರು ಆಸಿಸ್ ಬೌಲಿಂಗ್ ದಾಳಿಗೆ ಪೆವಿಲಿಯನ್ ಪೆರೇಡ್ ನಡೆಸಿದರು. ಶ್ರೇಯಸ್ ಅಯ್ಯರ್ 26, ಆರ್. ಅಶ್ವಿನ್ 16, ಅಕ್ಷರ್ ಪಟೇಲ್ 15, ನಾಯಕ ರೋಹಿತ್ ಶರ್ಮಾ 12 ಹಾಗೂ ವಿರಾಟ್ ಕೊಹ್ಲಿ 13 ರನ್ ಗಳಿಸಿದರು.
ಆಸ್ಟ್ರೇಲಿಯಾ ಬೌಲರ್ ಲಿಯಾನ್ 8 ವಿಕೆಟ್ ಪಡೆದು ಭಾರತಕ್ಕೆ ಸಂಕಷ್ಟ ತಂದಿಟ್ಟರು. ಮಿಚೆಲ್ ಸ್ಟಾರ್ಕ್ ಹಾಗೂ ಕುಹ್ನೆಮನ್ ತಲಾ 1 ವಿಕೆಟ್ ಪಡೆದು ಲಿಯಾನ್ ಗೆ ಸಾಥ್ ನೀಡಿದರು.