ಬೆಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಗಾಗಿ ಸ್ಯಾಂಡಲ್ವುಡ್ ಸ್ಟಾರ್ ನಟ ‘ರಾಜಕುಮಾರ’ ಪುನೀತ್ ರಾಜ್ಕುಮಾರ್ರವರ ಮನ ಮಿಡಿದಿದೆ. ಅವರು ಇಂದು 5 ಲಕ್ಷ ರೂ.ಗಳನ್ನು ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದಾರೆ.
ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಭೀಕರ ಪ್ರವಾಹದಿಂದಾಗಿ ಜನಜೀವನ ತತ್ತರಿಸಿದ್ದಾರೆ. ಜನರು ಮನೆಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ರಾಜ್ಯದ ಜನ್ರು ನೆರವಾಗುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಕಲಾವಿದರುಗಳು ಕೂಡ ಸಂತ್ರಸ್ತರಿಗೆ ನೆರವಾಗುವಂತೆ ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರಲ್ಲದೇ, ಸ್ವತಃ ಅವರೇ ಮುಂದೆ ಬಂದು ದೇಣಿಗೆಗಳನ್ನು ನೀಡಿದ್ದಾರೆ. ಇದೀಗ ಸ್ಯಾಂಡಲ್ವುಡ್ ‘ಯುವರತ್ನ’ ಪುನೀತ್ ರಾಜ್ಕುಮಾರ್ ಕೂಡ ನೆರೆ ಸಂತ್ರಸ್ತರಿಗಾಗಿ ಧನಸಹಾಯವನ್ನು ಮಾಡಿದ್ದಾರೆ. ಅವರು ಇಂದು ಸಿಎಂ ಬಿಯಸ್ವೈ ಅವರನ್ನು ಭೇಟಿಯಾಗಿ 5 ಲಕ್ಷ ರೂ.ಗಳನ್ನು ದೇಣಿಗೆ ನೀಡಿ ಔದರ್ಯ ಮೆರೆದಿದ್ದಾರೆ.
ಬಳಿಕ ಮಾತಾಡಿದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವ್ರು, ನಾವೆಲ್ಲಾ ನಮ್ಮ ಕೈಲಾದ ಸಹಾಯವನ್ನ ಮಾಡುತ್ತೇವೆ. ಇನ್ನಷ್ಟು ಆರ್ಥಿಕ ನೆರವು ಕೊಡುವ ಯೋಜನೆ ಇದೆ. ಕೆಲವು ಕಾರ್ಯಕ್ರಮಗಳನ್ನು ಇದಕ್ಕಾಗಿ ಹಾಕಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.