Sunday, October 27, 2024

‘ಮೈತ್ರಿ’ಗೆ ಜೀವದಾನ, ಅತೃಪ್ತರಿಗೆ ತಾತ್ಕಾಲಿಕ ರಿಲೀಫ್..!

ನವದೆಹಲಿ: ಮ್ಮ ಕರ್ನಾಟಕ ರಾಜಕಾರಣ ಕುತೂಹಲದ ಗೂಡಾಗಿದೆ. ಇಡೀ ದೇಶದ ಗಮನ ರಾಜ್ಯ ರಾಜಕಾರಣದತ್ತ ನೆಟ್ಟಿದೆ. ಈ ನಡುವೆ ಅತೃಪ್ತರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಮೈತ್ರಿ ಸರ್ಕಾರಕ್ಕೂ 4 ದಿನಗಳ ಜೀವದಾನ ದೊರೆತಿದೆ.
ಹೌದು, ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಮಂಗಳವಾರದ ತನಕ ಯಥಾಸ್ಥಿತಿಯನ್ನು ಮುಂದುವರೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಇದರಿಂದ ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ, ಅನರ್ಹಗೊಳಿಸುವಂತೆಯೂ ಇಲ್ಲ. ಸುಪ್ರೀಂ ಆದೇಶದಿಂದಾಗಿ ಅತೃಪ್ತರಿಗೆ ಅನರ್ಹತೆ ಭೀತಿಯಿಂದ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ -ಜೆಡಿಎಸ್​ ಮೈತ್ರಿ ಸರ್ಕಾರಕ್ಕೂ ಮಂಗಳವಾರದವರೆಗೆ ಜೀವದಾನ ಸಿಕ್ಕಂತಾಗಿದೆ. ಅತೃಪ್ತರಿಗೆ ಅನರ್ಹತೆ ಭೀತಿ, ಸರ್ಕಾರಕ್ಕೆ ಪತನದ ಭೀತಿಯಿಂದ ನಾಲ್ಕು ದಿನಗಳ ಕಾಲ ಉಸಿರಾಡಲು ಅವಕಾಶ ಲಭಿಸಿದೆ.
ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡ್ತಿದ್ದಾರೆ ಅಂತ ಅತೃಪ್ತ ಶಾಸಕರು ಸ್ಪೀಕರ್ ವಿರುದ್ಧ ಸಲ್ಲಿಸಿದ್ದ ಅರ್ಜಿ ಮತ್ತು ಸರ್ಕಾರ, ಸ್ಪೀಕರ್​ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಮಂಗಳರವಾರಕ್ಕೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರೆಗೂ ಯಥಾಸ್ಥತಿ ಮುಂದುವರೆಸುವಂತೆ ಸೂಚಿಸಿದೆ. ಅತೃಪ್ತ ಶಾಸಕರ ಪರವಾಗಿ ಮುಕುಲ್​ ರೋಹ್ಟಗಿ, ಸ್ಪೀಕರ್ ಪರವಾಗಿ ಅಭಿಷೇಕ್​ ಮನು ಸಿಂಘ್ವಿ ವಾದ ಮಂಡಿಸಿದ್ರು.

RELATED ARTICLES

Related Articles

TRENDING ARTICLES