ಬೆಂಗಳೂರು: ಲೋಕಸಭಾ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಯೇತರ ಪಕ್ಷಗಳು ಫುಲ್ ಟೆನ್ಶನ್ಗೊಳಗಾಗಿವೆ. ಲೋಕಸಭಾ ಚುನಾವಣೋತ್ತರ ಸಮೀಕ್ಷೆಯಿಂದ ವಿಪಕ್ಷಗಳಲ್ಲಿ ತಳಮಳ ಸೃಷ್ಟಿಯಾಗಿದ್ದು, ಸಮೀಕ್ಷೆ ರಾಜ್ಯ ಸರ್ಕಾರದ ನಿದ್ದೆಯನ್ನೂ ಕೆಡಿಸಿದೆ. ಎಕ್ಸಿಟ್ ಪೋಲ್‌ನಿಂದ ದೋಸ್ತಿ ಎದೆಯಲ್ಲಿ ನಡುಕ ಹುಟ್ಟಿಕೊಂಡಿದ್ದು, ಸೋಲು-ಗೆಲುವಿನ ಲೆಕ್ಕಾಚಾರದ ನಡುವೆಯೇ ಮಹತ್ವದ ಸಭೆ ನಡೆಯುತ್ತಿದೆ. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಇಂದು ಜೆಡಿಎಲ್‌ಪಿ ಸಭೆ ಕರೆದಿದ್ದಾರೆ.
ದೇವೇಗೌಡರು ಬೆಂಗಳೂರಿನ ಜೆಡಿಎಸ್ ಸಭೆಯಲ್ಲಿ ಮುಖಂಡರ ಜೊತೆ ಚರ್ಚೆ ನಡೆಸಲಿದ್ದು, ಲೋಕ ಫಲಿತಾಂಶದ ಬಗ್ಗೆ ದೊಡ್ಡಗೌಡ್ರು ತಲೆ ಕೆಡಿಸಿಕೊಂಡಿದ್ದಾರೆ. ಮೇ.23ರ ನಂತರ ರಾಜ್ಯ ರಾಜಕಾರಣದ ಚಿತ್ರಣ ಏನಾಗುತ್ತೋ ಎಂಬ ಆತಂಕ ದೋಸ್ತಿ ನಾಯಕರಲ್ಲಿ ಮನೆ ಮಾಡಿದೆ. ಜೆಡಿಎಸ್ ಮುಖಂಡರ ಜೊತೆ ದೇವೇಗೌಡರು, ಸಿಎಂ ಕುಮಾರಸ್ವಾಮಿ ಸಮಾಲೋಚನೆ ನಡೆಸಲಿದ್ದಾರೆ. ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ.