ಶಿವಮೊಗ್ಗ: ಬಿ. ಎಸ್ ಯಡಿಯೂರಪ್ಪ ಅವರಿಗೆ ರೆಸ್ಟ್ ಅಗತ್ಯವಿದೆ. ಅವರ ಪಾರ್ಟಿಯವರೇ ರೆಸ್ಟ್ ಮಾತನ್ನು ಹೇಳಲಿದ್ದಾರೆ ಅಂತ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸುತ್ತಿರುವ ಸಚಿವ ಡಿ. ಕೆ. ಶಿವಕುಮಾರ್ ಅವರು ಮಾತನಾಡಿ, “ಯಡಿಯೂರಪ್ಪ ಅವರಿಗೆ ಟ್ರಯಲ್, ಟೆಸ್ಟ್ ಎಲ್ಲಾ ಅವಕಾಶ ನೀಡಿಯಾಗಿದೆ. ಈಗ ಅವರಿಗೆ ರೆಸ್ಟ್ ಅಗತ್ಯವಿದೆ. ಕೇಂದ್ರ ನಾಯಕರೇ ಅವರಿಗೆ ರೆಸ್ಟ್ ನೀಡಲಿದ್ದಾರೆ. ಬದಲಾವಣೆಗಾಗಿ ನಿಮ್ಮ ಸೇವೆಗೆ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡಿ” ಎಂದಿದ್ದಾರೆ.
100 ಜನ ಡಿಕೆಶಿ ಬಂದ್ರೂ ಏನೂ ಮಾಡಕ್ಕಾಗಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಮಾತನ್ನು ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಹೇಳಲಿ ನೋಡೋಣ. ಏ. 3ರವರೆಗೆ ಸಮಯ ನೀಡುತ್ತೇನೆ. ಹೇಳಲಿ” ಎಂದು ಸವಾಲೆಸೆದಿದ್ದಾರೆ.