ಬೆಂಗಳೂರು : ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀರಸ ಪ್ರದರ್ಶನವನ್ನೇ ಮುಂದುವರೆಸಿದೆ. 12ನೇ ಆವೃತ್ತಿಯ ಐಪಿಎಲ್ನಲ್ಲಿ ತಾನಾಡಿದ 2ನೇ ಮ್ಯಾಚ್ನಲ್ಲೂ ಆರ್ಸಿಬಿ ಸೋಲನುಭವಿಸಿದೆ.
ಆರ್ಸಿಬಿ ತನ್ನ ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ 6ರನ್ಗಳಿಂದ ಸೋತಿತು. ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಮುಂಬೈಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ಕ್ಯಾಪ್ಟನ್ ರೋಹಿತ್ ಶರ್ಮಾ (48) ಮತ್ತು ವಿಕೆಟ್ ಕೀಪರ್ ಡಿ.ಕಾಕ್ (23) ಉತ್ತಮ ಆರಂಭ ಒದಗಿಸಿದ್ರು. ಈ ಜೋಡಿ 54 ರನ್ ಗಳ ಜೊತೆಯಾಟವಾಡಿತು. ಸೂರ್ಯಕುಮಾರ್ ಯಾದವ್ 38, ಯುವರಾಜ್ ಸಿಂಗ್ 23, ಹಾರ್ದಿಕ್ ಪಾಂಡ್ಯ 32ರನ್ಗಳ ಕೊಡುಗೆ ನೀಡಿದ್ರು. ಅಂತಿಮವಾಗಿ ಮುಂಬೈ ತನ್ನ ಪಾಲಿನ 20 ಓವರ್ ಗಳಲ್ಲಿ 187ರನ್ ಬಾರಿಸಿತು. ಆರ್ಸಿಬಿ ಪರ ಚಹಲ್ 4 ವಿಕೆಟ್ ಹಾಗೂ ಉಮೇಶ್ ಯಾದವ್, ಮಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದು ಮಿಂಚಿದ್ರು.
ಗುರಿ ಬೆನ್ನತ್ತಿದ ಆರ್ಸಿಬಿ 27ರನ್ ಗಳಿಸುವಷ್ಟರಲ್ಲಿ ಮೊಯಿನ್ ಅಲಿ (13) ವಿಕೆಟ್ ಕಳೆದು ಕೊಂಡಿತು. ಆದರೆ, ಪಾರ್ಥಿವ್ ಪಾಟೀಲ್ 31, ನಾಯಕ ವಿರಾಟ್ ಕೊಹ್ಲಿ 46 ಹಾಗೂ ಎಬಿ ಡಿವಿಲಯರ್ಸ್ ಅಜೇಯ 70ರನ್ ಗಳಿಸಿ ಗೆಲುವಿನ ದಡ ಸೇರಿಸೋ ಪ್ರಯತ್ನ ಮಾಡಿದ್ರು. ಕೊನೇ ಹಂತದಲ್ಲಿ ಪಂದ್ಯ ಸಂಪೂರ್ಣ ಮುಂಬೈ ತೆಕ್ಕೆಯಲ್ಲಿದ್ದಾಗ ಎಬಿಡಿ ಆರ್ಸಿಬಿಯತ್ತ ವಿಜಯಲಕ್ಷ್ಮೀಯ ಚಿತ್ತವನ್ನು ತಿರುಗಿಸಿದ್ರು. ಆದರೆ, ಬೂಮ್ರಾ, ಮಲಿಂಗ ಅಂತಿಮ ಎರಡು ಓವರ್ ಗಳಲ್ಲಿ ಅತ್ಯುತ್ತಮ ಬಾಲ್ ಗಳನ್ನು ಎಸೆದು ಆರ್ಸಿಬಿಯಿಂದ ಗೆಲುವು ಕಸಿದುಕೊಂಡರು.
ಆರ್ಸಿಬಿ ತನ್ನ ಮೊದಲ ಮ್ಯಾಚ್ನಲ್ಲಿ ಚೆನ್ನೈಸೂಪರ್ ಕಿಂಗ್ಸ್ ವಿರುದ್ಧವೂ ಸೋತಿತ್ತು. ಈಗ ತವರಿನಲ್ಲೂ ಮುಖಭಂಗ ಅನುಭವಿಸಿದೆ.
ತವರಲ್ಲೂ ಆರ್ಸಿಬಿಗೆ ಮುಖಭಂಗ..!
TRENDING ARTICLES