ಮಂಡ್ಯ : ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ನಾಮಪತ್ರ ಅಸಿಂಧುವಾಗುವ ಆತಂಕದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಇದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಹಳೇ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವಧಿ ಮುಗಿದ ಬಳಿಕ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರು ನಿಖಿಲ್ ಅವರನ್ನು ಕರೆಸಿ ಹೊಸ ಮಾದರಿಯಲ್ಲಿ ನಾಮಪತ್ರ ಪಡೆದಿದ್ದರು. ಅವಧಿ ಮುಗಿದ ಮೇಲೆ ಕಾನೂನು ಬಾಹಿರವಾಗಿ ಹೊಸ ಮಾದರಿಯಲ್ಲಿ ನಾಮಪತ್ರವನ್ನು ಡಿ.ಸಿ ಸ್ವೀಕರಿಸಿದ್ದಾರೆ. ಆ ನಾಮಪತ್ರವನ್ನು ಅಸಿಂಧುಗೊಳಿಸಬೇಕು ಅಂತ ಸುಮಲತಾ ಬೆಂಬಲಿಗರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರು ಮಂಡ್ಯಕ್ಕೆ ಆಗಮಿಸಿ, ದೂರುದಾರರೊಡನೆ ಚರ್ಚಿಸಿದ್ದು, ನಿಖಿಲ್ ಅವರ ನಾಮಪತ್ರ ಅಸಿಂಧುವಾಗುವ ಹಾಗೂ ಡಿ.ಸಿ ತಲೆದಂಡವಾಗುವ ಸಾಧ್ಯತೆ ಇದೆ.
ನಿಖಿಲ್ ನಾಮಪತ್ರ ಅಸಿಂಧುವಾಗುತ್ತಾ?
TRENDING ARTICLES