Friday, November 22, 2024

ಗ್ರೌಂಡ್​ ರಿಪೋರ್ಟ್​ : ಹಾಸನದಲ್ಲಿ ‘ಕಮಲ’ ಅರಳಿಸ್ತಾರಾ ಎ.ಮಂಜು?

ಗ್ರೌಂಡ್​ ರಿಪೋರ್ಟ್​ 3: ಹಾಸನ ಲೋಕಸಭಾ ಕ್ಷೇತ್ರ

ಹಾಸನ : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರ ಮೊಮ್ಮಗ, ಸಚಿವ ಹೆಚ್.ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಗೌಡ (ಪ್ರಜ್ವಲ್​ ರೇವಣ್ಣ) ಹಾಗೂ ಇತ್ತೀಚೆಗಷ್ಟೇ ಬಿಜೆಪಿಗೆ ಮರಳಿರುವ ಎ.ಮಂಜು ಅವರ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದೆ ಹಾಸನ ಲೋಕಸಭಾ ಕ್ಷೇತ್ರ,
ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, 8 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಜೆಡಿಎಸ್​ ಎಂಎಲ್​ಎಗಳು ಹಾಗೂ 2ರಲ್ಲಿ ಮಾತ್ರ ಬಿಜೆಪಿ ಎಂಎಲ್​ಎಗಳಿದ್ದಾರೆ.

ವಿಧಾನಸಭಾ ಕ್ಷೇತ್ರಗಳು ಮತ್ತು ಶಾಸಕರು

ಹಾಸನ – ಬಿಜೆಪಿ (ಪ್ರೀತಂ ಗೌಡ /
ಹೊಳೆ ನರಸಿಪುರ – ಜೆಡಿಎಸ್ (ಹೆಚ್.ಡಿ ರೇವಣ್ಣ)
ಶ್ರವಣಬೆಳಗೊಳ – ಜೆಡಿಎಸ್ (ಸಿ.ಎನ್. ಬಾಲಕೃಷ್ಣ)
ಅರಸೀಕೆರೆ – ಜೆಡಿಎಸ್ (ಕೆ.ಎಂ. ಶಿವಲಿಂಗೇಗೌಡ)
ಬೇಲೂರು – ಜೆಡಿಎಸ್ (ಕೆ.ಎಸ್.ಲಿಂಗೇಶ್0
ಆಲೂರು ಸಕಲೇಶಪುರ –  ಜೆಡಿಎಸ್ (ಹೆಚ್.ಕೆ.ಕುಮಾರಸ್ವಾಮಿ)
ಅರಕಲಗೂಡು –  ಜೆಡಿಎಸ್ (ಎ.ಟಿ. ರಾಮಸ್ವಾಮಿ)
ಕಡೂರು – ಬಿಜೆಪಿ (ಬೆಳ್ಳಿ ಪ್ರಕಾಶ್)

ಇನ್ನೂ ಖಾತೆ ತೆರೆದಿಲ್ಲ ಬಿಜೆಪಿ
ಇದುವರೆಗೆ ಕಾಂಗ್ರೆಸ್ ನಿಂದ 9 ಮಂದಿ, ಜೆಡಿಎಸ್​ನಿಂದ 3 ಮಂದಿ ಹಾಗೂ ಇತರೆ ಪಕ್ಷಗಳಿಂದ 5 ಮಂದಿ ಸಂಸತ್ತು ಪ್ರವೇಶಿಸಿದ್ದಾರೆ. ಆದರೆ, ಹಾಸನ ಲೋಕಸಭಾ ಕ್ಷೇತ್ರ ಇದುವರೆಗೂ ಒಬ್ಬರೇ ಒಬ್ಬ ಬಿಜೆಪಿ ಸಂಸದರನ್ನು ಕಂಡಿಲ್ಲ..!
ಮೈಸೂರು ರಾಜ್ಯ
1951, 1957, 1962 : ಹೆಚ್. ಸಿದ್ದನಂಜಪ್ಪ, ಕಾಂಗ್ರೆಸ್
1967 : ಎನ್​. ಶಿವಪ್ಪ , ಸ್ವತಂತ್ರ ಪಾರ್ಟಿ
1971 : ಎನ್​. ಶಿವಪ್ಪ, ಕಾಂಗ್ರೆಸ್​
ಕರ್ನಾಟಕ ರಾಜ್ಯ
1974 : ಹೆಚ್.ಆರ್ ಲಕ್ಷ್ಮಣ್ , ಕಾಂಗ್ರೆಸ್​
1977 : ಎಸ್​ ನಂಜೇಶ್ ಗೌಡ, ಭಾರತೀಯ ಲೋಕದಳ
1980, 1984 : ಹೆಚ್.ಎನ್​ ನಂಜೇಗೌಡ, ಕಾಂಗ್ರೆಸ್
1989 : ಹೆಚ್​.ಸಿ ಶ್ರೀಕಾಂತ್, ಕಾಂಗ್ರೆಸ್
1991 : ಹೆಚ್.ಡಿ ದೇವೇಗೌಡ, ಜನತಾ ದಳ
1996 : ರುದ್ರೇಶ್​ ಗೌಡ, ಜನತಾ ದಳ
1998 : ಹೆಚ್.ಡಿ ದೇವೇಗೌಡ, ಜನತಾ ದಳ
1999 : ಜಿ. ಪುಟ್ಟಸ್ವಾಮಿ ಗೌಡ, ಕಾಂಗ್ರೆಸ್​
2004, 2009, 2014 : ಹೆಚ್.ಡಿ ದೇವೇಗೌಡ, ಜೆಡಿಎಸ್

2014 – ಹಾಸನ ಲೋಕ ಸಮರ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಳೆದ ವರ್ಷ ಎ.ಮಂಜು ಅವರ ವಿರುದ್ಧ 1,00,463 ಮತಗಳ ಅಂತರದ ಗೆಲುವು ಪಡೆದಿದ್ದರು. ದೇವೇಗೌಡ್ರು 5,09,841 ಮತ ಪಡೆದಿದ್ರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು 4,09,378ಮತಗಳನ್ನು, ಹಾಗೂ ಬಿಜೆಪಿಯ ಸಿ.ಹೆಚ್​ ವಿಜಯ್​ ಶಂಕರ್ 1,65,688 ಮತಗಳನ್ನು ಪಡೆದಿದ್ದರು.

‘ಮತ’ ಗಣಿತ
ಪುರುಷರು 8,22,399
ಮಹಿಳೆಯರು 8,07,188
ಒಟ್ಟು 16,29,587

‘ಜಾತಿ’ಗಣಿತ
ಒಕ್ಕಲಿಗ 4,43,000
ಎಸ್ಸಿ/ಎಸ್ಟಿ 2,74,000
ಲಿಂಗಾಯುತ 2,70,000
ಕುರುಬ 1,97,000
ಮುಸ್ಲಿಂ 1,19,000
ಬ್ರಾಹ್ಮಣ/ಲಂಬಾಣಿ/ದೇವಾಂಗ 67,000
ಜೈನರು 11,000
ಇತರೆ 2,17,000

ಹಾಸನ ಕದನ ಕಲಿಗಳ ಬಲಾಬಲ
ಪ್ರಜ್ವಲ್​ಗೆ ಪೂರಕ ಅಂಶಗಳು
ಮಾಜಿ ಪ್ರಧಾನಿ ದೇವೇಗೌಡರ ಹೆಸರೇ ಪ್ರಜ್ವಲ್ಗೆ ಪ್ರಬಲ ಅಸ್ತ್ರ
ನನ್ನ ಉತ್ತರಾಧಿಕಾರಿ ಅಂತಾ ದೇವೇಗೌಡರೇ ಘೋಷಣೆ ಮಾಡಿರೋದು
ಒಕ್ಕಲಿಗರ ಮತಗಳೇ ನಿರ್ಣಾಯಕ ಆಗಿರುವುದು ಅನುಕೂಲ
ಮೈತ್ರಿ ಅಭ್ಯರ್ಥಿ ಆಗಿದ್ದು ಕಾಂಗ್ರೆಸ್ ಪಕ್ಷದಲ್ಲೂ ಬೆಂಬಲ ಸಾಧ್ಯತೆ
ತಂದೆ ಲೋಕೋಪಯೋಗಿ ಸಚಿವ, ಚಿಕ್ಕಪ್ಪ ಸಿಎಂ ಆಗಿರುವ ಪ್ರಭಾವ
6 ಶಾಸಕರು ಮತ್ತು ಜಿಲ್ಲೆಯ ಬಹತೇಕ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷಕ್ಕೆ ಅಧಿಕಾರ
ತಂದೆ ರೇವಣ್ಣ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಶ್ರೀರಕ್ಷೆ
10 ವರ್ಷಗಳಿಂದ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು ಪರಿಚಿತ ಆಗಿರುವುದು

ಪ್ರಜ್ವಲ್​ಗೆ ಇರುವ ಆಂತಕಗಳು
ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಹೆಚ್ಚಾಗ್ತಿರೋ ಆಕ್ರೋಶ
ಬೇರೆ ಮುಖಂಡರ ಬೆಳವಣಿಗೆಗೆ ಪಕ್ಷದಲ್ಲಿ ಅವಕಾಶ ಇಲ್ಲ ಎನ್ನುವ ಆರೋಪ
ಜೆಡಿಎಸ್​ನಲ್ಲಿನ ಹಿರಿಯರನ್ನು ಬಿಟ್ಟು ಪ್ರಜ್ವಲ್​​ಗೆ ಟಿಕೆಟ್ ನೀಡಿರೋದು
ಕಾಂಗ್ರೆಸ್ ಪಕ್ಷದ ಮುಖಂಡರಲ್ಲೂ ಮಡುಗಟ್ಟಿರುವ ಅಸಮಾಧಾನ
ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರಿ ಪ್ರಬಲ ಎದುರಾಳಿ ಆಗಿದ್ದು
ಕ್ಷೇತ್ರದಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದು, ಹೆಚ್ಚುತ್ತಿರುವ ಕಮಲ ಪ್ರಭಾವ
ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ

ಎ.ಮಂಜು ಪೂರಕ ಅಂಶಗಳು
‘ಕೈ’ಬಿಟ್ಟು ಕೇಂದ್ರದಲ್ಲಿ ಅಧಿಕಾರ ಇರುವ ಬಿಜೆಪಿ ಅಭ್ಯರ್ಥಿ ಆಗಿದ್ದು
ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ರೂ ಜಿಲ್ಲೆಯಲ್ಲಿರುವ ಪ್ರಭಾವ
ಸಚಿವರಾಗಿದ್ದ ವೇಳೆ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು
ದೇವೇಗೌಡರ ಬಗ್ಗೆ ಗೌರವದಿಂದಲೇ ಮಾತಾಡಿ ಕುಟುಂಬ ವಿರೋಧಿಸಿದ್ದು
ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಇರುವ ನಾಯಕರ ಆಂತರಿಕ ಬೆಂಬಲ
ಬಿಜೆಪಿ ಅಭ್ಯರ್ಥಿ ಆಗಿದ್ರೂ ಕಾಂಗ್ರೆಸ್ನಲ್ಲೂ ಬೆಂಬಲ ಗಿಟ್ಟಿಸುವ ಸಾಧ್ಯತೆ
ಹಾಸನದಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದು, ಹೆಚ್ಚುತ್ತಿರುವ ಕಮಲ ಪ್ರಭಾವ

ಎ.ಮಂಜುಗೆ ಇರುವ ಆತಂಕಗಳು

ಅಧಿಕಾರ ದಾಹಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರೋಪ
ಹಾಸನ ಲೋಕ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಇರುವ ಪ್ರಾಬಲ್ಯ
ಮಂಜು ವಿರೋಧಿಸಿ ‘ಕೈ’ಹಿಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್
ಜಿಲ್ಲಾ ಬಿಜೆಪಿ ಮುಖಂಡರಲ್ಲಿ ಎ.ಮಂಜು ವಿರುದ್ಧ ಇದೆ ಅಸಮಾಧಾನ
ಆಪರೇಷನ್ ಕಮಲ ಸಂದರ್ಭದಲ್ಲಿ ಪ್ರೀತಂ ಗೌಡ ಹೆಸರು ಕೇಳಿಬಂದಿದ್ದು
ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಗೆ ಪ್ರಬಲ ನೆಲೆ ಇಲ್ಲದಿರುವುದು
ಕ್ಷೇತ್ರಾದ್ಯಂತ ದೇವೇಗೌಡ್ರು, ರೇವಣ್ಣ, ಜೆಡಿಎಸ್ ಪ್ರಭಾವ ಹೆಚ್ಚಾಗಿರುವುದು

ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು

ಬೇಸಿಗೆ ಕಾಲದಲ್ಲಿ ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ
ಹೇಮಾವತಿ, ಯಗಚಿ ನೀರಾವರಿ ಯೋಜನೆ ಅಪೂರ್ಣ ಆಗಿರುವುದು
ಸಂಪೂರ್ಣ ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ತಲುಪಿಸುವಲ್ಲಿ ವೈಫಲ್ಯ
ಕೃಷಿ, ಹೈನುಗಾರಿಕೆ ಆಧಾರಿತ ಕೈಗಾರಿಕೆಗಳು ಸ್ಥಳೀಯರಿಗೆ ಪ್ರಯೋಜನ ಆಗ್ತಿಲ್ಲ
ಇಸ್ರೋ, ಪೆಟ್ರೋಲಿಯಂ ಸಂಶೋಧನಾ ಕೇಂದ್ರಗಳು ಸ್ಥಳೀಯರಿಗೆ ಬಲು ದೂರ
ಪಾರಂಪರಿಕ, ದೇಗುಲಗಳ ರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಳಜಿ ಇಲ್ಲ
ಹಾಸನದಿಂದ ಬೆಂಗಳೂರಿಗೆ ಏಕ್ಸ್ಪ್ರೆಸ್ ರೈಲುಗಳ ಕೊರತೆ ಇರುವುದು
ವಿಶ್ವವಿಖ್ಯಾತ ಪ್ರವಾಸಿ ತಾಣಗಳಿಗೂ ಸಮರ್ಪಕ ಸಂಚಾರ ಇಲ್ಲದಿರುವುದು
ಪ್ರವಾಸೋದ್ಯಮ ಮೂಲಕ ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ ಕಂಡಿರುವುದು

ಹಾಲಿ ಸಂಸದರು ಮಾಡಿದ್ದೇನು ?
ಕ್ಷೇತ್ರಾದ್ಯಂತ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳ ಜಾರಿ
ಹೇಮಾವತಿ ನೀರು ಸದ್ಬಳಕೆ ಮಾಡಿಕೊಂಡು ಜಿಲ್ಲೆಗೆ ಕಾಯಕಲ್ಪ
ಕೃಷಿಯ ಜೊತೆಗೆ ಹೈನೋದ್ಯಮ ಸೇರಿ ಉಪಕಸುಬಿಗೆ ಉತ್ತೇಜನ
ಬೆಂಗಳೂರು – ಮಂಗಳೂರು ರಾಷ್ಟ್ರೀಯ ಚತುಷ್ಪಥ ಹೆದ್ದಾರಿ
ಹಾಸನದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಡೆದಿದೆ ಸಿದ್ಧತೆ
ಹೈಟೆಕ್ ಬಸ್ ನಿಲ್ದಾಣ ಹಾಗೂ ಹೈಟೆಕ್ ನ್ಯಾಯಾಲಯ ಕಟ್ಟಡ
ಜಿಲ್ಲೆಯಾದ್ಯಂತ ಪದವಿ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳು

ಕ್ಷೇತ್ರದ ಕಿರು ಪರಿಚಯ
ಮಲೆನಾಡ ಮಡಿಲಲ್ಲಿರುವ ಹಾಸನ ಸುಂದರ ಪ್ರವಾಸಿ ತಾಣಗಳ ಕಣಜ
ಶಿಲ್ಪಕಲೆಗಳ ತೊಟ್ಟಿಲು ಬೇಲೂರು ಹಳೆಬೀಡು, ವಿಶ್ವಪ್ರಸಿದ್ಧ ಶ್ರವಣಬೆಳಗೊಳ
ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಲಯನ್ ಸಫಾರಿ
ಸಕಲೇಶಪುರದ ಬಿಸಿಲೆ ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ
ಮನಸೂರೆಗೊಳ್ಳುತ್ತೆ ಸಕಲೇಶಪುರದ ಮಂಜರಾಬಾದ್ ಕೋಟೆ
ಹಾಸನದಲ್ಲಿದೆ ಇಸ್ರೋ ಕೇಂದ್ರ ಕಚೇರಿಯ ಪ್ರಮುಖ ನಿರ್ವಹಣಾ ಘಟಕ

RELATED ARTICLES

Related Articles

TRENDING ARTICLES