ಮಂಡ್ಯ: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಮಂಡ್ಯದ ಪೂರ್ಣಚಂದ್ರ ಕೂಡ ಒಬ್ಬರು. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದಕೊಂಡ ಪೋಷಕರ ಗೋಳು ಹೇಳತೀರದಾಗಿದ್ದು. ಮಗನ ಸಮಾಧಿ ಮುಂದೆ ಕುಳಿತು ತಂದೆ ಅಳುತ್ತಿರುವ ದೃಷ್ಯ ಎಲ್ಲರ ಮನ ಕಲಕುವಂತಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತ ಘೋರ ದುರಂತದಲ್ಲಿ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದ ನಿವಾಸಿ ಪೂರ್ಣಚಂದ್ರ(26) ಮಣ್ಣಲ್ಲಿ ಮಣ್ಣಾಗಿದ್ದಾರೆ. ತನ್ನ ಮಗನ ಜೀವನದ ಬಗ್ಗೆ ನಿರಂತರ ಬೆಟ್ಟದಷ್ಟು ಕನಸು ಕಾಣುತ್ತಿದ್ದ ಮೃತ ತಂದೆ ಇದೀಗ ಮಗನ ಸಮಾಧಿ ಮುಂದೆ ಕುಳಿತು ಮೂಕ ರೋಧನೆ ಮಾಡುತ್ತಿದ್ದಾರೆ. ಇದನ್ನೂ ಓದಿ :ಸಿದ್ದರಾಮಯ್ಯ ಒಬ್ಬ ಹೇಡಿ, ಅಸಹಾಯಕ ಮುಖ್ಯಮಂತ್ರಿ; ಭಾಸ್ಕರ್ ರಾವ್ ಆಕ್ರೋಶ
ಇತ್ತ ಮೃತ ಪೂರ್ಣಚಂದ್ರ ತಾಯಿ ಕಾಂತಾಮಣಿ ಕೂಡ ಮೊದಲೇ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು. ಇದೀಗ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಒಂದು ಹನಿ ನೀರನ್ನು ಕುಡಿಯಡೆ ಮೂಲೆ ಹಿಡಿದಿದ್ದಾರೆ. ರಾಯಸಮುದ್ರ ಗ್ರಾಮವು ಕೂಡ ತನ್ನ ಹುಟ್ಟೂರಿನ ಯುವಕನ ಸಾವಿನಿಂದ ಹೊರಬರಲಾಗದೆ ನೀರವ ಮೌನ ಆವರಿಸಿದೆ.
ಮೃತರ ತಂದೆ ಚಂದ್ರು ಮಾತನಾಡುತ್ತಾ “ನನಗೆ ನನ್ನ ಮಗನೇ ದೊಡ್ಡ ಆಸ್ತಿಯಾಗಿದ್ದ ಈಗ ಅವನೇ ಇಲ್ಲ ಎಷ್ಟಿದ್ದರೇನು ಪ್ರಯೋಜನ, ನನಗೆ ಬಂದ ಪರಿಸ್ಥಿತಿ ಪ್ರಪಂಚದಲ್ಲಿರುವ ಯಾವ ವ್ಯಕ್ತಿಗೂ ಬರಬಾರದು ಎಂದು ಕಂಬನಿ ಮಿಡಿಯುತ್ತ ರೋಧಿಸಿತ್ತು. ನೋಡುವವರ ಕಲ್ಲು ಹೃದಯವೂ ಕರಗುವಂತಿದೆ. ಇದನ್ನೂ ಓದಿ:ಬಕ್ರೀದ್ ಸಂಭ್ರಮ; 5 ಲಕ್ಷ ಮೊತ್ತಕ್ಕೆ ಮೇಕೆ ಮಾರಾಟ ಮಾಡಿದ ರೈತ ಫುಲ್ ಖುಷ್
ಸಾವಿಗೂ ಮೊದಲು ಹೆಣ್ಣು ನೋಡಿದ್ದ ಪೂರ್ಣಚಂದ್ರ..!
ಮಂಗಳವಾರ ಮನೆಗೆ ಬಂದಿದ್ದ ಪೂರ್ಣಚಂದ್ರ ಆರ್ಸಿಬಿ ಗೆಲುವನ್ನು ಕುಟುಂಬಸ್ಥರು, ಗೆಳೆಯರೊಂದಿಗೆ ಅದ್ದೂರಿಯಾಗಿ ಆಚರಿಸಿದ್ದ. ಇದಾದ ಮರುದಿನವೇ ಅಂದರೆ ಬುಧವಾರ ಕುಟುಂಬಸ್ಥರೊಂದಿಗೆ ಪಾಂಡವಪುರ ತಾಲೂಕಿನ ಗ್ರಾಮವೊಂದರಲ್ಲಿ ಮದುವೆಗೆ ಹೆಣ್ಣು ನೋಡಲು ತೆರಳಿದ್ದ. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದ ಪೂರ್ಣಚಂದ್ರ ದುರಂತದಲ್ಲಿ ಸಾವನ್ನಪ್ಪಿದ್ದನು. ಇದನ್ನೂ ಓದಿ :ಸನ್ಮಾನದ ಅವಶ್ಯಕತೆ ಇತ್ತ, 50 ರೂಪಾಯಿ ಪೇಟ ಹಾಕಿ, ಅವಮಾನ ಮಾಡಿ ಕಳ್ಸಿದ್ದೀರಾ: HD ಕುಮಾರಸ್ವಾಮಿ