ಬೆಂಗಳೂರು: ಆರ್ಸಿಬಿ ಕಪ್ ಗೆದ್ದ ಸಂಭ್ರಮಚರಣೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿದ್ದು. ಈ ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಆದರೆ ಈ ವೇಳೆ ಮೊಬೈಲ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು. 250ಕ್ಕೂ ಹೆಚ್ಚು ಮೊಬೈಲ್ ಕಳ್ಳತನದ ದೂರುಗಳು ದಾಖಲಾಗಿದೆ.
ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಕುಣಿಯುತ್ತಿದ್ದ ಬೆಂಗಳೂರು ನಿನ್ನೆ(ಜೂ,04) ಅಕ್ಷರಶಃ ಸ್ಮಶಾಣದ ರೀತಿ ಬದಲಾಗಿದೆ. 11 ಜನ ತಮ್ಮ ಪ್ರಾಣಪಕ್ಷಿ ಕಳೆದುಕೊಂಡಿದ್ದರೆ. 47 ಜನರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂತಹ ಸಂದರ್ಭವನ್ನೇ ಕಾಯುತ್ತಿದ್ದ ಜೇಬು ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ನೂರಾರು ಮೊಬೈಲ್ಗಳನ್ನು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ :ಮದ್ವೆಗೆ ಹುಡುಗಿ ನೋಡ್ಕೊಂಡು ಬೆಂಗಳೂರಿಗೆ ಬಂದಿದ್ದ ಯುವಕ ಸಾ*ವು ; ಪೋಷಕರ ಆಕ್ರಂದನ
ನಿನ್ನೆ ಒಂದೇ ದಿನ ಸುಮಾರು 250ಕ್ಕೂ ಹೆಚ್ಚು ಮೊಬೈಲ್ ಕಳ್ಳತನದ ದೂರುಗಳು ದಾಖಲಾಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ. ಬಹುತೇಕರು ಇ-ಲಾಸ್ಟ್ ವೆಬ್ಸೈಟ್ ಮೂಲಕ ದೂರು ದಾಖಲಿಸಿದ್ದು. ದೂರಿನನ್ವಯ ಪೊಲೀಸರು ಓರ್ವ ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ವ್ಯಕ್ತಿಯಿಂ 15 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ :‘ಸರ್ಕಾರಕ್ಕೆ ನಮ್ಮ ಶಾಪ ತಟ್ಟದೆ ಇರಲ್ಲ’; ಮೃತ ಭೂಮಿಕ್ ಪೋಷಕರ ಆಕ್ರೋಶ