Thursday, August 21, 2025
Google search engine
HomeASTROLOGYದರಿದ್ರ ಸರ್ಕಾರ, ಜಮೀರ್ ಮಗ, ರಿಜ್ವಾನ್ ಮಗನಿಗೆ ವೇದಿಕೆ ಮೇಲೆ ಏನು ಕೆಲಸ; ಪ್ರತಾಪ್​ ಸಿಂಹ...

ದರಿದ್ರ ಸರ್ಕಾರ, ಜಮೀರ್ ಮಗ, ರಿಜ್ವಾನ್ ಮಗನಿಗೆ ವೇದಿಕೆ ಮೇಲೆ ಏನು ಕೆಲಸ; ಪ್ರತಾಪ್​ ಸಿಂಹ ಆಕ್ರೋಶ

ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕಣದ ಬಗ್ಗೆ ಮಾಜಿ ಸಂಸದ ಪ್ರತಾಪ್​ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು. ‘ಸರ್ಕಾರದ ಬೇಜವಬ್ದಾರಿಯಿಂದ ಘಟನೆ ಸಂಭವಿಸಿದೆ. ಸಿಎಂ ಮೊಮ್ಮಗ, ಸಚಿವರ ಮಕ್ಕಳ ಪೊಟೋಗ್ರಾಫ್​ಗಾಗಿ ವಿಧಾನ ಸೌದದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ, ವೇದಿಕೆ ಮೇಳೆ ರಿಜ್ವಾನ್​ ಮಗ, ಜಮೀರ್​ ಮಗನಿಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ :ಕಾಲ್ತುಳಿತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾ*ವು; ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಆಕ್ರೋಶ

ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್​ ಸಿಂಹ ” ಸರಕಾರದ ಬೇಜವಾಬ್ದಾರಿಯಿಂದ ಸಂಭ್ರಮಾಚರಣೆ ಶೋಕಾಚರಣೆ ಆಯಿತು. ಸಿದ್ದರಾಮಯ್ಯ ಬರೀ ಒರಟು ವ್ಯಕ್ತಿ ಅಂತ ಅಂದ್ಕೋಡಿದ್ದೆ, ಆದರೆ ಸಿದ್ದರಾಮಯ್ಯ ಸಂವೇದನೆ ಇಲ್ಲದ ನಿರ್ಭಾವುಕ ನಿರ್ಲಜ್ಜ ಮನುಷ್ಯ ಎಂಬುದು ನಿನ್ನೆ ಗೊತ್ತಾಯಿತು. ಇದನ್ನೂ ಓದಿ :ನಿಷ್ಠೆ ಪ್ರಶಸ್ತಿ ಗೆಲ್ಲುವುದಷ್ಟೇ ಅಲ್ಲ, ಅದು ಇತಿಹಾಸ ನಿರ್ಮಿಸುತ್ತದೆ; ಆನಂದ್ ಮಹಿಂದ್ರಾ

ಸಿಎಂ ಮೊಮ್ಮಗ, ಸಚಿವರು ಅಧಿಕಾರಿಗಳ ಮಕ್ಕಳ ಫೋಟೋಗ್ರಾಫ್, ಆಟೋಗ್ರಾಫ್​ಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಯಿತು. ಯುಪಿಯ ಸಿಎಂ ಯೋಗಿ ಅದಿತ್ಯನಾಥ್​ಗೆ ಭದ್ರತೆಯ ಪಾಠ ಮಾಡಿದ್ದ ಸಂತೋಷ್ ಲಾಡ್, ಪ್ರಿಯಾಂಕ ಖರ್ಗೆ ಈಗ ಎಲ್ಲಿ ಹೋದ್ರು? ಯುಪಿ ಸಿಎಂ 60 ಕೋಟಿ ಜನರನ್ನು ಸಂಭಾಳಿಸಿದ್ದಾರೆ, ಆದರೆ ನೀವು 60 ಸಾವಿರ ಜನರನ್ನು ಸಂಭಾಳಿಸಲು ಆಗಲಿಲ್ಲ.ಕಾಂಗ್ರೆಸ್ ಸರ್ಕಾರಕ್ಕೆ ದರಿದ್ರ ಬಂದಿದೆ. ಆರ್​ಸಿಬಿ ಗೆಲುವಲ್ಲಿ ಪ್ರಚಾರ ಪಡೆಯಲು ಜನರನ್ನು ಬಲಿ ಕೊಟ್ಟಿತು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಶಾಲು, ಗ್ಲಾಸ್ ಹಾಕಿಕೊಂಡು ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಅದನ್ನು ಬಿಟ್ಟು ಯಾವ ತಯಾರಿಯೂ ಮಾಡಿಕೊಂಡಿರಲಿಲ್ಲ. ಸರ್ಕಾರಕ್ಕೆ ವಿರಾಟ್ ಕೊಹ್ಲಿ ಫೋನ್ ಮಾಡಿ ಇವತ್ತೆ ಬಂದು ಬಿಡ್ತಿನಿ, ಪ್ರೋಗ್ರಾಂ ಮಾಡಿ ಅಂದಿದ್ರಾ? ನಿಮಗೆ ಮರು ದಿನವೆ ಕಾರ್ಯಕ್ರಮ ಮಾಡುವ ಒತ್ತಡ ಏನಿತ್ತು ಹೇಳಿ? ರೋಡ್ ಶೋ ಮಾಡಿದ್ದರೆ ಲಕ್ಷಾಂತರ ಜನ ನೋಡುತ್ತಿದ್ದರು. ಸರಕಾರಕ್ಕೆ ಮಿನಿಮಮ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಇದನ್ನೂ ಓದಿ:RCB ಅಭಿಮಾನಿಗಳಿಗೆ ಕೊಟ್ಟಿದ್ದ ಮಾತು ಈಡೇರಿಸಿದ ಕೃನಾಲ್​ ಪಾಂಡ್ಯ

ವೇದಿಕೆ ಮೇಲೆ ಜಮೀರ್​ ಮಗ, ರಿಜ್ವಾನ್​ ಮಗನಿಗೆ ಏನು ಕೆಲಸ..!

ವಿಧಾನಸೌದದ ವೇದಿಕೆ ಮೇಲೆ ನಡೆದ ಕಾರ್ಯಕ್ರಮದಲ್ಲಿ ಜಮೀರ್ ಮಗ, ರಿಜ್ವಾನ್ ಮಗ, ಮುಖ್ಯ ಕಾರ್ಯದರ್ಶಿ ಮಗಳು, ಸಿಎಂ ನಿಮ್ಮ ಮೊಮ್ಮಗ ನಿಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿದ್ರಾ?ಆಂಧ್ರದಲ್ಲಿ ನಟ ಅಲ್ಲು ಅರ್ಜುನ್ ನನ್ನು ಕಾಲ್ತುಳಿತ ಪ್ರಕರಣದಲೇ ಅರೆಸ್ಟ್ ಮಾಡಿದ್ರು. ಈಗ ಇಲ್ಲಿ ಸಿಎಂ ಅರೆಸ್ಟ್ ಆಗುತ್ತರಾ? ಡಿಸಿಎಂ ಅರೆಸ್ಟ್ ಆಗುತ್ತರಾ? ಗೃಹ ಮಂತ್ರಿ ತಲೆ ದಂಡ ಆಗುತ್ತಾ? ಯಾರು ಇದಕ್ಕೆ ಹೊಣೆ ಹೇಳಿ. ಸರ್ಕಾರ ತಿಪ್ಪೇ ಸಾರಿಸಲು ತನಿಖೆಗೆ ಆದೇಶ ಮಾಡಿದೆ. ಇವರ ತನಿಖೆಯಿಂದ ಪ್ರಯೋಜನ ಇಲ್ಲ ಇವರು ಕರ್ನಾಟಕ ಪೊಲೀಸರ ಇಲಾಖೆಗೆ ಕಳಂಕ ತರುವ ಕೆಲಸ ಮಾಡಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments