Thursday, August 21, 2025
Google search engine
HomeASTROLOGYಸಿಎಂ, ಡಿಸಿಎಂ ಯಾವುದೇ ತಪ್ಪು ಮಾಡಿಲ್ಲ; ಕಾಲ್ತುಳಿತದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

ಸಿಎಂ, ಡಿಸಿಎಂ ಯಾವುದೇ ತಪ್ಪು ಮಾಡಿಲ್ಲ; ಕಾಲ್ತುಳಿತದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

ಮೈಸೂರು: ಬೆಂಗಳೂರಿನಲ್ಲಿ ನಡೆದ RCB ವಿಜಯೋತ್ಸವದಲ್ಲಿ 11 ಜನರು ಸಾವನ್ನಪ್ಪಿದ ಘಟನೆ ಬಗ್ಗೆ ಮಾತನಾಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ‘ ಸರ್ಕಾರ ತನ್ನ ತಪ್ಪನ್ನ ಒಪ್ಪಿಕೊಂಡಿಲ್ಲ, ಆದರೆ ಸಿಎಂ, ಡಿಸಿಎಂ ಯಾವುದೇ ತಪ್ಪು ಮಾಡಿಲ್ಲ. ಒತ್ತಡದಿಂದ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಭೀಕರ ಕಾಲ್ತುಳಿತ, ಸ್ವಯಂ ಪ್ರೇರಿತವಾಗಿ PIL ದಾಖಲಿಸಿಕೊಂಡ ಹೈಕೋರ್ಟ್​; ವರದಿ ಸಲ್ಲಿಸಲು ಸೂಚನೆ

ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಪರಿಷತ್​ ಸದಸ್ಯ ಯತೀಂದ್ರ ಸಿದ್ದರಾಮಯ್ಯ “ನಿನ್ನೆಯ ಘಟನೆಯಲ್ಲಿ ತಪ್ಪುಗಳು ಆಗಿರುವುದು ಸತ್ಯ. ಸರ್ಕಾರ ಕೂಡ ತಪ್ಪನ್ನ ಒಪ್ಪಿಕೊಂಡಿದೆ. ನೀರಿಕ್ಷೆ ಮಾಡಿದ್ದಕ್ಕಿಂತ ಅತಿ ಹೆಚ್ಚು ಜನ ಬಂದಿದ್ದಾರೆ. ಹೀಗಾಗಿ ಇಂತಹ ಘಟನೆ ನಡೆದಿದೆ. ಇದರಲ್ಲಿ ಸಿಎಂ ಹಾಗೂ ಡಿಸಿಎಂ ತಪ್ಪು ಯಾವುದು ಇಲ್ಲ. ಕಾರ್ಯಕ್ರಮ ಮಾಡಲು ಸರ್ಕಾರದ ಮೇಲೆ ಒತ್ತಡ ಇತ್ತು. ಈ ಒತ್ತಡದ ಕಾರಣಕ್ಕೆ ಕಾರ್ಯಕ್ರಮ ಮಾಡಲಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: RCB ಗೆಲುವನ್ನು ಸಂಭ್ರಮಿಸುತ್ತಿದ್ದ ಯುವಕನಿಗೆ ಚಾಕು ಇರಿದ ದುಷ್ಕರ್ಮಿ

ಕಾರ್ಯಕ್ರಮಕ್ಕೆ ಸಚಿವರ ಕುಟುಂಬಸ್ಥರು ಬಂದಿರಬಹುದು..!

ವಿಧಾನ ಸೌದ ಮುಂದೆ ಯಾವುದೇ ಲೋಪ ಉಂಟಾಗಿಲ್ಲ ಎಂದು ಹೇಳಿದ ಯತೀಂದ್ರ ಸಿದ್ದರಾಮಯ್ಯ “ವಿಧಾನಸೌಧದ ಮುಂದೆ ಮಾಡಿದ ಕಾರ್ಯಕ್ರಮಕ್ಕೆ ಯಾವುದೇ ಲೋಪ ಉಂಟಾಗಿಲ್ಲ. ಅಲ್ಲಿ ಅತಿ ಹೆಚ್ಚು ಜನಬರಲೇ ಇಲ್ಲ. ವೇದಿಕೆ ಮೇಲೆ ಸಚಿವರ ಮತ್ತು ಅವರ ಸಂಬಂಧಿಕರು ಬಂದಿರಬಹುದು, ಅದರಲ್ಲಿ ಯಾವುದೇ ಲೋಪ ಉಂಟಾಗಿಲ್ಲ. ಆದರೆ ಜನರು ಕ್ರಿಕೆಟರ್​ಗಳನ್ನು ನೋಡಲು ಸ್ಟೇಡಿಯಂ ಬಳಿಗೆ ಹೋಗಿದ್ದರು.

ಇದನ್ನೂ ಓದಿ :ಕಾಲ್ತುಳಿತದಲ್ಲಿ 10ಕ್ಕೂ ಹೆಚ್ಚು ಮಂದಿ ಸಾ*ವು; ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಆಕ್ರೋಶ

ಕಾರ್ಯಕ್ರಮ ಆಯೋಜನೆಯಲ್ಲಿ ತಪ್ಪಾಗಿರುವು ಸತ್ಯ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನ ಪತ್ತೆ ಮಾಡಲು ಮ್ಯಾಜುಸ್ಟ್ರೇಟ್ ಕಮಿಟಿ ರಚನೆ ಮಾಡಲಾಗಿದೆ. ಈಗಲೇ ಇಂತಹವರೇ ತಪ್ಪಿತಸ್ಥರು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಒಂದು ವೇಳೆ ರೋಡ್ ಶೋ ಮಾಡಿದ್ದರೆ ಕ್ರಿಕೆಟಿಗರ ಭದ್ರತೆಗೆ ತೊಂದರೆಯಾಗುತ್ತಿತ್ತು. ಹೀಗಾಗಿ ರೋಡ್ ಶೋ ಮಾಡಲಿಲ್ಲ. ಎರಡೆರೆಡು ಕಡೆ ಕಾರ್ಯಕ್ರಮ ಮಾಡಿದರಿಂದ ಅವಘಡ ಸಂಭವಿಸಿದೆ ಎಂಬುದು ಹೇಳುವುದು ಸರಿಯಲ್ಲ.ನಿರೀಕ್ಷೆಗಿಂತ ಎರಡು ಮೂರು ಲಕ್ಷ ಜನ ಬಂದರು. ಹೀಗಾಗಿ ಅವಘಡ ಸಂಭವಿಸಿದೆ ಎಂದು ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments