ದೆಹಲಿ: ಪಹಲ್ಗಾಂ ದಾಳಿಯ ನಂತರ ಮೊದಲ ಭಾರಿಗೆ ಸಂಸತ್ ಮುಂಗಾರು ಅಧಿವೇಶನ ಕರೆಯಲಾಗಿದ್ದು. ಜುಲೈ 21ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ಮೂರು ತಿಂಗಳ ವಿರಾಮದ ನಂತರ ಜುಲೈ 21ರ ಬೆಳಿಗ್ಗೆ 11 ಗಂಟೆಗೆ ಈ ಸಭೆ ಸೇರಲಿದೆ. ಇದನ್ನೂ ಓದಿ :ಬೆಂಗಳೂರಿಗೆ ಬಂದಿಳಿದ ‘ರೆಡ್ ಆರ್ಮಿ’; ಕನ್ನಡ ಧ್ವಜ ಕೊಟ್ಟು ಸ್ವಾಗತಿಸಿದ ಡಿಕೆಶಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಅಧಿವೇಶನದ ದಿನಾಂಕಗಳನ್ನು ಶಿಫಾರಸು ಮಾಡಿದೆ ಎಂದು ರಿಜಿಜು ತಿಳಿಸಿದರು. ಬಜೆಟ್ ಅಧಿವೇಶನವು ಜನವರಿ 31 ರಂದು ಪ್ರಾರಂಭವಾಗಿ ಏಪ್ರಿಲ್ 4 ರಂದು ಕೊನೆಗೊಂಡಿತು, ಆಗ ಎರಡೂ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಲಿದೆಯ ಸರ್ಕಾರ..!
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ನಂತರ ವಿಪಕ್ಷಗಳು ಮೋದಿ ಸರ್ಕಾರಕ್ಕೆ ವಿಶೇಷ ಅಧಿವೇಶನ ಕರೆಯುವಂತೆ ಒತ್ತಡ ಹೇರಿದ್ದವು. ಆದರೆ ಸರ್ಕಾರ ಅಧಿವೇಶನ ಕರೆಯದೆ, ಎರಡು ಭಾರಿ ಸರ್ವಪಕ್ಷಗಳ ಸಭೆ ಕರೆದು ಮಾಹಿತಿ ನೀಡಿತ್ತು. ಆದರೆ ಇದಕ್ಕೆ ಒಪ್ಪಂದ ವಿರೋಧ ಪಕ್ಷದ ನಾಯಕರು ವಿಶೇಷ ಅಧಿವೇಶನ ಕರೆಯಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದರ ನಡುವೆ ಈ ಘೋಷಣೆ ಬಂದಿದೆ. ಇದನ್ನೂ ಓದಿ :‘ಕನ್ನಡದ ನಟರು ತಮಿಳಿನಲ್ಲಿ ನಟಿಸುತ್ತಿದ್ದಾರೆ’; ಪರೋಕ್ಷವಾಗಿ ಬೆದರಿಕೆ ಹಾಕಿದ ತಮಿಳು ನಿರ್ಮಾಪಕರು
ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕರ ಹತ್ಯೆ ನಡೆದಿತ್ತು, ಪಾಕ್ ಉಗ್ರರು ಈ ದಾಳಿ ನಡೆಸಿದ್ದರು. ಇದರ ಪ್ರತೀಕಾರವಾಗಿ ಪಾಕ್ ವಿರುದ್ಧ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು.ಈ ಘಟನೆಯ ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಮುಂಗಾರು ಅಧಿವೇಶನ ಕರೆದಿದೆ.ಇದನ್ನೂ ಓದಿ :RCB ವಿಜಯೋತ್ಸವಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ; ತೆರೆದ ಬಸ್ ಪರೇಡ್ಗೆ ಇಲ್ಲ ಅವಕಾಶ
ಈ ಅಧಿವೇಶನದಲ್ಲಿ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿದ ಕುರಿತು ಚರ್ಚೆ ನಡೆಯಲಿವೆ. ಚರ್ಚೆಯ ನಂತರ ಕೇಂದ್ರ ಸರ್ಕಾರದಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದಲ್ಲಿ ಹಾನಿಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿದೆ.