ಬೆಂಗಳೂರು: ತಮಿಳು ನಟ ಕಮಲ್ ಹಾಸನ್ ಅಭಿನಯದ ಥಗ್ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಮುಂಡೂಡಿಕೆಯಾದ ಬೆನ್ನಲ್ಲೇ, ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ ಕರ್ನಾಟಕ ಫಿಲಂ ಛೇಂಬರ್ಗೆ ಪತ್ರವೊಂದನ್ನು ಬರೆದಿದ್ದು. ಕನ್ನಡ ನಟರು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಿರುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ಎರಡು ಭಾಷೆ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕು ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ.
ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿರಿಯ ನಟ ಕಮಲ್ ಹಾಸನ್ ವಿರುದ್ದ ರಾಜ್ಯದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು. ಕಮಲ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂಬ ಕೂಗುಗಳು ಕೇಳಿ ಬರುತ್ತಿವೆ. ಇದರ ನಡುವೆ ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದು. ಹೈಕೋರ್ಟ್ ನಟನನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ಚಿತ್ರ ಬಿಡುಗಡೆಯನ್ನು ಒಂದು ವಾರ ಮುಂದೂಡಿದೆ. ಇದನ್ನೂ ಓದಿ :RCB ಅಭಿಮಾನಿಗಳಿಗೆ ಕೊಟ್ಟಿದ್ದ ಮಾತು ಈಡೇರಿಸಿದ ಕೃನಾಲ್ ಪಾಂಡ್ಯ
ಈಗಿರುವಾಗ ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ ಕನ್ನಡ ಫಿಲ್ಮ ಚೇಂಬರ್ಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ” ‘ಥಗ್ ಲೈಫ್’ ಚಲನಚಿತ್ರವನ್ನು ಸುಗಮವಾಗಿ ಬಿಡುಗಡೆ ಮಾಡಲು ಅವಕಾಶ ನೀಡಬೇಕೆಂದು ವಿನಂತಿಸಿದ್ದಾರೆ, ತಮಿಳು ಮತ್ತು ಕನ್ನಡ ಚಲನಚಿತ್ರೋದ್ಯಮಗಳು ಹಲವು ವರ್ಷಗಳಿಂದ ಸಾಮರಸ್ಯದಿಂದ ಕೆಲಸ ಮಾಡುತ್ತಿವೆ. ಕನ್ನಡದ ಹಲವಾರು ನಟರಾದ ಶಿವರಾಜ್‌ಕುಮಾರ್, ಸುದೀಪ್, ಉಪೇಂದ್ರ, ದುನಿಯಾ ವಿಜಯ್, ಕಿಶೋರ್, ಅಚ್ಯುತ್ ಕುಮಾರ್ ಮತ್ತು ಇತರರು ತಮಿಳು ಚಿತ್ರರಂಗದಲ್ಲಿ ಮತ್ತು ತಮಿಳು ಚಿತ್ರರಂಗದ ಅನೇಕ ಚಲನಚಿತ್ರ ನಿರ್ಮಾಪಕರು ಮತ್ತು ಕನ್ನಡ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ:RCB ವಿಜಯೋತ್ಸವಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ; ತೆರೆದ ಬಸ್ ಪರೇಡ್ಗೆ ಇಲ್ಲ ಅವಕಾಶ
ಈಗಿರುವಾಗ ಎರಡು ಚಲನಚಿತ್ರೋದ್ಯಮಗಳ ನಡುವಿನ ಸಾಮರಸ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳಬಾರದು. ‘ಥಗ್ ಲೈಫ್’ ಲೈಫ್ ಸಿನಿಮಾ ಮೇಲಿನ ನಿಷೇದವನ್ನು ಹಿಂತೆಗೆದುಕೊಂಡು ಜೂನ್ 5ಕ್ಕೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕು ಎಂದು ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಕೋರಿಕೊಂಡಿದೆ. ಇದನ್ನೂ ಓದಿ :IPL 2025; ಆರ್ಸಿಬಿ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮಾಜಿ ಪ್ರಧಾನಿ ರಿಷಿ ಸುನಕ್
ಆದರೆ ಕನ್ನಡದ ನಟರು ತಮಿಳಿನಲ್ಲಿ ನಟನೆ ಮಾಡುತ್ತಿದ್ದಾರೆ. ಅದಕ್ಕೆ ಥಗ್ಲೈಫ್ ಸಿನಿಮಾ ಬಿಡುಗಡೆ ಅವಕಾಶ ಕೊಡಬೇಕು ಎಂದು ಉಲ್ಲೇಖಿಸಿರುವುದು, ಪರೋಕ್ಷವಾಗಿ ಬೆದರಿಕೆ ಹಾಕಿರುವ ರೀತಿಯಲ್ಲಿ ಕಾಣಿಸುತ್ತಿದೆ. https://whatsapp.com/channel/0029Va5cjRY9Gv7Tls4bhb1n