ಅಹಮದಾಬಾದ್: 17 ವರ್ಷಗಳ ವನವಾಸ ಅಂತ್ಯವಾಗಿದ್ದು. ಕೊನೆಗೂ ಆರ್ಸಿಬಿಯ ಕಪ್ ಗೆಲ್ಲುವ ಕನಸು ನನಸಾಗಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡಕ್ಕೆ ಯುಕೆ ಮಾಜಿ ಪ್ರಧಾನಿ ಹಾಗೂ ಬೆಂಗಳೂರಿನ ಅಳಿಯ ರಿಷಿ ಸುನಕ್ ಬೆಂಬಲಿಸಿದ್ದು. ಆರ್‌ಸಿಬಿ ಗೆಲುವನ್ನು ಕುಣಿದಾಡುತ್ತ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: RCB ಗೆಲುವಿಗೆ ರಾಜ್ಯಪಾಲರಿಂದ ಅಭಿನಂದನೆ; ಈ ಸಲ ಕಪ್ ನಮ್ದು ಎಂದು ಸಿಎಂ ಸಿದ್ದರಾಮಯ್ಯ ಸಂತಸ
ಪಂಜಾಬ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಆಗಮಿಸಿದ್ದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದರು. ಮ್ಯಾಚ್‌ನ ಆರಂಭದಿಂದಲೂ ಕೊನೆಯ ವರೆಗೂ ಹುರುಪಿನಿಂದಲೇ ಪಾಲ್ಗೊಂಡಿದ್ದರು. ಇದನ್ನೂ ಓದಿ: RCB ಗೆಲುವನ್ನು ಸಂಭ್ರಮಿಸುತ್ತಿದ್ದ ಯುವಕನಿಗೆ ಚಾಕು ಇರಿದ ದುಷ್ಕರ್ಮಿ
ಆರ್‌ಸಿಬಿ ಬ್ಯಾಟರ್‌ಗಳು ಸಿಕ್ಸ್, ಫೋರ್ ಹೊಡೆದಾಗಲೆಲ್ಲ ರಿಷಿ ಸುನಕ್ ಅವರು ಎದ್ದು ಜೋಶ್‌ನಲ್ಲಿ ಸಂಭ್ರಮಿಸುತ್ತಿದ್ದರು. ಹಾಗೆಯೇ ಬೌಲಿಂಗ್ ವೇಳೆ ಪಂಜಾಬ್ ವಿಕೆಟ್ ಬೀಳುತ್ತಿದ್ದಾಗಲೂ ಖುಷಿ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಐಸಿಸಿ ಅಧ್ಯಕ್ಷ ಜಯ್ ಶಾ ಕೂಡ ರಿಷಿ ಸುನಕ್ ಜೊತೆಯಲ್ಲಿದ್ದರು. ಇದನ್ನೂ ಓದಿ: ಇಂದು ಸಂಜೆ ಬೆಂಗಳೂರಿನಲ್ಲಿ RCB ವಿಜಯಯಾತ್ರೆ; ಅಭಿಮಾನಿಗಳಲ್ಲಿ ಸಂತಸ
ಆರ್‌ಸಿಬಿ ಅಭಿಮಾನಿ ಎಂದಿದ್ದ ರಿಷಿ ಸುನಕ್..!
ಫಿನಾಲೆ ಪಂದ್ಯಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಿಷಿ ಸುನಕ್ “ನಾನು ಬೆಂಗಳೂರಿನ ಅಳಿಯ. ಆರ್‌ಸಿಬಿಗೂ ನನಗೂ ಬಿಡಿಸಲಾಗದ ನಂಟಿದೆ. ವಿರಾಟ್ ಕೊಹ್ಲಿ ನನ್ನ ಫೇವರಿಟ್ ಎಂದು ಈ ಹಿಂದೆ ರಿಷಿ ಸುನಕ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಮದುವೆ ಸಂದರ್ಭಧಲ್ಲಿ ಅಕ್ಷತಾ ಪೋಷಕರಾದ ಸುಧಾ ಮೂರ್ತಿ ಮತ್ತು ನಾರಯಣ ಮೂರ್ತಿ ಅವರು ಆರ್‌ಸಿಬಿ ಜರ್ಸಿ ನೀಡಿದ್ದರು ಎಂದು ಹೇಳಿಕೊಂಡಿದ್ದರು.