ದೆಹಲಿ: ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರು ಇಂದು ಪುಣೆ ವಿಶ್ವವಿದ್ಯಾಲಯದಲ್ಲಿ ಭವಿಷ್ಯದ ಯುದ್ಧಗಳು ಕುರಿತು ಉಪನ್ಯಾಸ ನೀಡಿದ್ದು, ಆಪರೇಷನ್ ಸಿಂಧೂರ್ ಸಮಯದಲ್ಲಿ ಅನುಭವಿಸಿದ ನಷ್ಟಗಳು ಮುಖ್ಯವಲ್ಲ, ಅದರ ಫಲಿತಾಂಶಗಳು ಮಾತ್ರ ಮುಖ್ಯ ಎಂದು ಹೇಳಿದ್ದಾರೆ. ಕಳೆದೆರಡು ದಿನಗಳ ಹಿಂದೆ ಸಿಂಗಪೂರ್ನಲ್ಲಿ ಮಾತನಾಡಿದ್ದ ಅನಿಲ್ ಚೌಹಾಣ್ ಭಾರತಕ್ಕ ಆಗಿರುವ ನಷ್ಟದ ಕುರಿತು ಧೃಡಪಡಿಸಿದರು.
ಇದನ್ನೂ ಓದಿ :ತಂದೆಯಾದ ಖುಷಿಯಲ್ಲಿದ್ದ ಫಿಲ್ಸಾಲ್ಟ್ ತಂಡಕ್ಕೆ ವಾಪಾಸ್; ನಿಟ್ಟುಸಿರು ಬಿಟ್ಟ RCB ಫ್ಯಾನ್ಸ್
ಮಂಗಳವಾರ ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ‘ಭವಿಷ್ಯದ ಯುದ್ಧಗಳು ಮತ್ತು ಯುದ್ಧ’ ಕುರಿತು ಉಪನ್ಯಾಸ ನೀಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ಕಾರ್ಯಚರಣೆಯಲ್ಲಿ ಸೋಲುಗಳು ಮುಖ್ಯವಲ್ಲ, ಕೇವಲ ಫಲಿತಾಂಶಗಳು ಮಾತ್ರ ಮುಖ್ಯ ಎಂದು ಹೇಳಿದರು.
ಭಯೋತ್ಪಾದನೆಗೆ ಹೆಚ್ಚು ಬಲಿಯಾದ ದೇಶ ಭಾರತ..!
ಪಹಲ್ಗಾಮ್ ಘಟನೆ ಬಗ್ಗೆ ಮಾತನಾಡಿದ ಸಿಡಿಎಸ್ ಅನಿಲ್ ಚೌಹಾಣ್ “ಧರ್ಮದ ಹೆಸರಿನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಲಾಗಿದೆ. ಇದು ಈ ಆಧುನಿಕ ಜಗತ್ತಿಗೆ ಒಂದು ರೀತಿಯಲ್ಲಿ ಸ್ವೀಕಾರಾರ್ಹವಲ್ಲ. ಇದು ಸಮಾಜದಲ್ಲಿ ಭಾರಿ ಅಸಹ್ಯವನ್ನು ಉಂಟುಮಾಡಿತು. ಪಹಲ್ಗಾಂ ದಾಳಿ ಭಾರತದ ಮೇಲೆ ನಡೆದ ಮೊದಲ ದಾಳಿಯಲ್ಲ. ಇಡೀ ವಿಶ್ವದಲ್ಲಿ ಭಾರತ ಹೆಚ್ಚು ಭಾರಿ ಭಯೋತ್ಪಾದಕ ಕೃತ್ಯಗಳಿಗೆ ಬಲಿಯಾಗಿದೆ. ಸುಮಾರು 20 ಸಾವಿರ ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ :‘ತಾಳ್ಮೆಯ ಫಲ ಸಿಹಿಯಾಗಿರುತ್ತೆ’ ; ಫೈನಲ್ ಪಂದ್ಯಕ್ಕೂ ಮುನ್ನ RCBಗೆ ಶುಭಕೋರಿದ ಸಿಎಂ ಸಿದ್ದರಾಮಯ್ಯ
ಈ ಹಿಂದೆ ಸಿಂಗಾಪುರದಲ್ಲಿ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರ್‌ನ ಆರಂಭಿಕ ಹಂತದಲ್ಲಿ ಅನಿರ್ದಿಷ್ಟ ಸಂಖ್ಯೆಯ ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಉನ್ನತ ಮಿಲಿಟರಿ ಜನರಲ್ ಮೊದಲ ಬಾರಿಗೆ ಒಪ್ಪಿಕೊಂಡಿದ್ದರು. ಆದರೆ, ಸಶಸ್ತ್ರ ಪಡೆಗಳು ತಮ್ಮ ತಪ್ಪುಗಳನ್ನು ತಕ್ಷಣ ಸರಿಪಡಿಸಿಕೊಂಡು ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಯಿತು ಎಂದು ಅವರು ಹೇಳಿದ್ದರು. ಆದರೆ, 4 ರಫೇಲ್‌ಗಳು ಸೇರಿದಂತೆ 6 ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನ ಪ್ರಧಾನಿಯ ಹೇಳಿಕೆಯನ್ನು ಅವರು “ಸಂಪೂರ್ಣವಾಗಿ ತಪ್ಪು” ಎಂದು ತಳ್ಳಿಹಾಕಿದರು.