ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ ಎ. ಜ್ಞಾನಶೇಖರನ್ ದೋಷಿ ಎಂದು ಚೆನೈ ಮಹಿಳಾ ನ್ಯಾಯಾಲಯ ಬುಧವಾರ ದೋಷಿ ಎಂದು ತೀರ್ಪು ನೀಡಿದ್ದು. ಆರೋಪಿಗೆ 30 ವರ್ಷಗಳ ಜೀವಾವಧಿ ಶಿಕ್ಷಯನ್ನ ವಿಧಿಸಲಾಗಿದೆ. ಇದನ್ನೂ ಓದಿ:ರಸ್ತೆಗೆ ಬೇಲಿ ಹಾಕಿದ ಭೂಪ; ಸ್ಮಶಾನಕ್ಕೆ ದಾರಿ ಇಲ್ಲದೇ ಹೆಣ ಹೂಳಲು ಪರದಾಟ
ಕಳೆದ ವರ್ಷ ಡಿಸೆಂಬರ್ 24ರಂದು ಸಂತ್ರಸ್ತೆಯು ಕೊಟ್ಟೂರುಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ (AWPS) ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿತು. ಜ್ಞಾನಶೇಖರನ್ ಸ್ನೇಹಿತನೊಂದಿಗೆ ಇದ್ದಾಗ ತನಗೆ ಬೆದರಿಕೆ ಹಾಕಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಬೆದರಿಕೆ ಹಾಕಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ಈ ಪ್ರಕರಣ ತಮಿಳುನಾಡಿನಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಇದನ್ನೂ ಓದಿ:ಕಲ್ಲಡ್ಕ ಪ್ರಭಾಕರ್ ಮೇಲೆ FIR; ಹಿಂದೂಗಳನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ರೇಣುಕಚಾರ್ಯ ಆರೋಪ
ಜ್ಞಾನಶೇಖರನ್ ತನ್ನ ಮೊಬೈಲ್ ಫೋನ್‌ನಲ್ಲಿ ಕೃತ್ಯವನ್ನು ರೆಕಾರ್ಡ್ ಮಾಡಿ ಬೆದರಿಕೆ ಹಾಕುತ್ತಿದ್ದನು ವಿದ್ಯಾರ್ಥಿನಿ ಬೆದರಿಕೆ ಒಡ್ಡಿದ ನಂತರ ಆತನನ್ನು ಬಂಧಿಸಲಾಯಿತು.
ಆರೋಪಿ ಜ್ಞಾನಶೇಖರ್ನ ವಿರುದ್ದ ಬಿಎನ್‌ಎಸ್ ಮತ್ತು ಬಿಎನ್‌ಎಸ್‌ಎಸ್‌ನ ಸೆಕ್ಷನ್ 329, 126(2), 87, 127(2), 75(2) ಜೊತೆಗೆ 75(i), (ii), (iii), 76, 64(1), 351(3), 238(b), ಐಟಿ ಕಾಯ್ದೆಯ ಸೆಕ್ಷನ್ 66 ಮತ್ತು ತಮಿಳುನಾಡು ಮಹಿಳಾ ಕಿರುಕುಳ ತಡೆ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಆರೋಪಗಳನ್ನು ಹೊರಿಸಿತ್ತು. ಇದನ್ನೂ ಓದಿ:ಕೌಟುಂಬಿಕ ಕಲಹ; ಅತ್ತಿಗೆಯನ್ನು ಕೊಂದು, ಆಕೆಯ ರುಂಡ ಹಿಡಿದು ಪೊಲೀಸರಿಗೆ ಶರಣಾದ ವ್ಯಕ್ತಿ
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು. ನ್ಯಾಯಾಧೀಶೆ ಎಂ.ರಾಜಲಕ್ಷ್ಮಿ ಆರೋಪಿ ಜ್ಞಾನಶೇಖರ್ನನ್ನು ಅಪರಾಧಿ ಎಂದು ಘೋಷಿಸಿದ್ದು. 30 ವರ್ಷಗಳ ಕಾಲ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.