Thursday, October 9, 2025
HomeUncategorizedರಾಜ್​ ಕುಮಾರ್ ಕನ್ನಡವೇ ಸರ್ವಸ್ವ ಅಂತಿದ್ರು, ಆದರೆ ಅವರ ಮಗ..! ಶಿವಣ್ಣ ವಿರುದ್ದ ನಾರಯಣಗೌಡ ಕಿಡಿ

ರಾಜ್​ ಕುಮಾರ್ ಕನ್ನಡವೇ ಸರ್ವಸ್ವ ಅಂತಿದ್ರು, ಆದರೆ ಅವರ ಮಗ..! ಶಿವಣ್ಣ ವಿರುದ್ದ ನಾರಯಣಗೌಡ ಕಿಡಿ

ಬೆಂಗಳೂರು : ‘ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂದು ವಿವಾದ ಸೃಷ್ಟಿಸಿರುವ ನಟ ಕಮಲ್​ ಹಾಸನ್​ ವಿರುದ್ದ ರಾಜ್ಯದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಕರವೇ ನಾರಾಯಣ ಗೌಡ ಮಾಧ್ಯಮದೊಂದಿಗೆ ಮಾತನಾಡಿದ್ದು ಶಿವರಾಜ್​ ಕುಮಾರ್ ಅವರ ವಿರುದ್ದ ಕಿಡಿ ಕಾಡಿದ್ದಾರೆ.

ಕಮಲ್​ ಹಾಸನ್​ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕಮಲ್​ ಹಾಸನ್​ ಅಭಿನಯಿಸಿರುವ ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂದು ಆಗ್ರಹಿಸಿವೆ. ಇದರ ನಡುವೆ ಕರವೇ ರಾಜ್ಯಧ್ಯಕ್ಷ ನಾರಾಯಣ ಗೌಡ ಮಾಧ್ಯಮದೊಂದಿಗೆ ಮಾತನಾಡಿ ಕಮಲ್​ ಹಾಸನ್​ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಿವಣ್ಣ ಮತ್ತು ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕು ಎಂದ ರಮ್ಯಾ ವಿರುದ್ದ ಕಿಡಿಕಾರಿದ್ದಾರೆ. ಇದನ್ನೂ ಓದಿ :ನಟ ದರ್ಶನ್​ಗೆ ಗುಡ್​ನ್ಯೂಸ್​; ವಿದೇಶಕ್ಕೆ ತೆರಳಲು ದಾಸನಿಗೆ ನ್ಯಾಯಾಲಯ ಅನುಮತಿ

ರಾಜ್​ಕುಮಾರ್​ ಪುತ್ರ ವೇದಿಕೆ ಮೇಲೆಯೆ ಪ್ರಶ್ನಿಸಬೇಕಿತ್ತು..!

ಈ ಕುರಿತು ಮಾತನಾಡಿದ ನಾರಯಣಗೌಡ “ಕಮಲ್​ ಹಾಸನ್​ ಈ ರೀತಿ ಹೇಳುವಾಗ, ರಾಜ್​ಕುಮಾರ್ ಅವರ ಪುತ್ರ ಅಲ್ಲಿಯೇ ಹೇಳಬಹುದಿತ್ತು. ಕನ್ನಡಕ್ಕೆ ತನ್ನದೇ ಆದ ಇತಿಹಾಸ ಇದೆ, ಲಿಪಿ ಇದೆ. ಕನ್ನಡ ಲಿಪಿಗಳ ರಾಣಿ ಎಂದು ಕರೆಸಿಕೊಂಡಿದೆ. ಶಿವರಾಜ್ ಕುಮಾರ್​ಗೆ ಭಾಷೆಯ ಬಗ್ಗೆ ಅರಿವಿರಲಿಲ್ಲ ಅನಿಸುತ್ತೆ ಅಂದುಕೊಳ್ಳೋಣ.
ಆದರೆ ಅದಾದ ಮೇಲೂ ಸಮರ್ಥನೆ ಮಾಡಿಕೊಳ್ಳುವುದನ್ನು ಸಹಿಸಿಸಲಾಗುವುದಿಲ್ಲ.

ರಾಜ್ ಕುಮಾರ್ ಕನ್ನಡವೇ ಸರ್ವಸ್ವ ಎನ್ನುತಿದ್ದರು. ಕನ್ನಡ ನನಗೆ ಮಾತಾಡೋದೇ ಖುಷಿ ಅಂತ ಹೇಳ್ತಿದ್ರು
ಕನ್ನಡ ಅಭಿಮಾನಿಗಳೇ ದೇವರು ಅಂತಿದ್ರು. ಆದರೆ ಇಂದು ಅವರ ಮಗ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಶಿವರಾಜ್​ ಕುಮಾರ್​ಗೆ ಕನ್ನಡಕ್ಕಿಂತ ಕಮಲ್ ಹಾಸನ್ ಅವರೇ ಹೆಚ್ಚಾದ್ರ.. ಕನ್ನಡಕ್ಕೆ ಧಕ್ಕೆ ಆದಾಗ ಅದನ್ನು ಸಮರ್ಥನೆ ಮಾಡ್ಕೊಬೇಕ. ಇದನ್ನೂ ಓದಿ :ದೊಡ್ಡವರೆಲ್ಲಾ ಜಾಣರಲ್ಲ; ವಿವಾದಾತ್ಮಕ ಹೇಳಿಕೆ ಕೊಟ್ಟ ಕಮಲ್​ಗೆ ಟಾಂಗ್​ ಕೊಟ್ಟ ರಚಿತಾ

ಏಳು ಕೋಟಿ ಕನ್ನಡಿಗರು ಅದನ್ನ ವಿರೋಧ ಮಾಡುತ್ತಿದ್ದಾಗ ಸಮರ್ಥನೆ ಮಾಡ್ಕೊಳ್ಳೋದು ತಪ್ಪು. ನೀವು ಕಮಲ್ ಹಾಸನ್ ಅವರನ್ನ ದೊಡ್ಡಣ್ಣ ಅಂದುಕೊಂಡಿದ್ದರೆ. ಕಮಲ್​ ಹಾಸನ್​ಗೆ ಕ್ಷಮೆ ಕೇಳಲು ಹೇಳಿ. ಇದು ದೊಡ್ಡ ಮನೆಗೆ ಸರಿ ಹೊಂದುವುದಿಲ್ಲ. ಈಗಲೂ ಇದನ್ನು ಸರಿ ಮಾಡಿಕೊಂಡು ಕಮಲ್​ ಹಾಸನ್​ಗೆ ಬುದ್ದಿಹೇಳಿ ಎಂದು ನಾರಯಣ್​ ಗೌಡ ಬುದ್ದಿ ಹೇಳಿದ್ದಾರೆ.

ನಟಿ ರಮ್ಯ ಉಪದೇಶ ನಮಗೆ ಬೇಡ..!

ಕಮಲ್ ಹಾಸನ್​ ಪರ ಬ್ಯಾಟ್​ ಬೀಸಿದ್ದ ಸ್ಯಾಂಡಲ್​ ವುಡ್​ ನಟಿ ರಮ್ಯ ವಿರುದ್ದವೂ ಕರವೇ ರಾಜ್ಯಧ್ಯಕ್ಷರು ಕಿಡಿಕಾರಿದ್ದು. ” ಈ ರೀತಿಯ ವಿಚಾರದಲ್ಲಿ ನಮಗೆ ಉಪದೇಶ ಬೇಕಾಗಿಲ್ಲ. ಯಾರೇ ಆಗಿರಲಿ ಈ ನೆಲದಲ್ಲಿ ಕನ್ನಡವೇ ದೊಡ್ಡದು. ಯಾರನ್ನೂ ಸಮರ್ಥನೆ ಮಾಡಿಕೊಳ್ಳಲು ಬರಬೇಡಿ. ನಿಮ್ಮ ಉಪದೇಶ ಕನ್ನಡಿಗ ಹೋರಾಟಗಾರರಿಗೆ ಬೇಡ. ನೀವು ಬುದ್ದಿ ಹೇಳೋದಿದ್ರೆ ಕಮಲ್​ ಹಾಸನ್​ಗೆ ಹೇಳಿ. ಕಮಲ್​ ಹಾಸನ್​ ಸಿನಿಮಾ ಇಲ್ಲಿ ರಿಲೀಸ್​ ಆಗ್ಬೇಕು ಅಂದ್ರೆ ಕ್ಷಮೆ ಕೇಳ್ಬೇಕು ಅಂತ ಹೇಳಿದರು. ಇದನ್ನೂ ಓದಿ :ಅಣ್ಣ-ತಮ್ಮಂದಿರ ನಡುವೆ ಜಗಳ; ಬಿಡಿಸಲು ಬಂದ ತಾಯಿಯನ್ನೇ ಕೊ*ಲೆ ಮಾಡಿದ ಪಾಪಿ ಮಗ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Cary Su on
WesleyCrorm on
JaimeJew on
Andrewattew on
VernonSpari on
ltaletnxdi on
Andrewattew on
Marvinescal on
Leroyvek on
VernonSpari on
RobertDam on
AnthonyKem on
BryanNib on
Daviddierm on
svo_jgmr on
Andrewattew on
StevenBoB on
Jerry on
Bogirashw on
Bombahkq on
AnthonyKem on
Andrewattew on
Stevenlox on
BriancaulK on
MichealWal on
EdwardKig on
Eugeniodaync on
Stevenhok on
BrianVes on
Kevinzix on
Darrellacera on
svo_pfmr on
Antondit on
Carlosjenry on
HowardUnsot on
DennisScaws on
Michaelmex on
JeremyTaicy on
RalphSab on
BrentFut on
MichaelCoelf on
xtaletbakk on
DavidTrino on
GilbertAnoms on
GustavoViomI on
StephenAmasy on
Kevinpaw on
RussellBoync on
CraigNib on
Jamesset on
CharlesBoaps on
CharlesRow on
JamesDYday on
SteveRig on
Jerrycek on
Kennylot on
ChrisEness on
Brianabils on
MichaelOrine on
ThomasVon on
StevenSam on
LeonardDem on
Jasonkah on
Johnnylow on
JeffreyAbnog on
Jerry on
Robertrib on
GeorgeBlich on
MatthewVak on
svo_msmr on
SamuelDoulk on
Michaelwax on
ylichnie kashpo_daKn on
SamuelDoulk on
Michaeljet on
gorshok s avtopolivom_qqot on
tele_bmmr on
Mohammeddlix on
tele_hfmr on
gorshok s avtopolivom_mqMl on
GeorgeEvisy on
Michaelhop on
Michaelhop on
Michaelcib on
dizainerskie kashpo_uimr on
Rogerciz on
Rogerciz on
XRumer23jinly on