ಕಾನ್ಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಶುಭಂ ದ್ವಿವೇದಿ ಅವರ ಕುಟುಂಬವನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದು. ಶುಭಂ ದ್ವಿವೇದಿ ಅವರ ಪತ್ನಿ ಅಶಾನ್ಯ ದ್ವಿವೇದಿ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕಾನ್ಪುರದ 31 ವರ್ಷದ ಉದ್ಯಮಿ ಶುಭಂ ದ್ವಿವೇದಿ ಪ್ರಾಣ ಕಳೆದುಕೊಂಡರು. ಶುಭಂ ದ್ವಿವೇದಿ ಕಳೆದ ಏಪ್ರೀಲ್ 12ರಂದು ಅಶಾನ್ಯ ದ್ವಿವೇದಿ ಅವರನ್ನು ವಿವಾಹವಾಗಿ ಕುಟುಂಬ ಸಮೇತ ಕಾಶ್ಮೀರಕ್ಕೆ ಪ್ರವಾಸ ಬೆಳೆಸಿದ್ದ ವೇಳೆ ಭಯೋತ್ಪಾದನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಇದನ್ನೂ ಓದಿ :ಐಪಿಎಲ್ ಟಿಕೆಟ್ ಮಾರಾಟ ದಂಧೆ; ಪೊಲೀಸರೆ ಕಿಂಗ್ಪಿನ್, ನಾಲ್ವರು ಬಂಧನ
ಭಯೋತ್ಪಾದನೆ ವಿರುದ್ದ ಹೋರಾಟ ಮುಂದುವರಿಯುತ್ತದೆ; ಪ್ರಧಾನಿ ಭರವಸೆ
ಕಾನ್ಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಶುಭಂ ಅವರ ಪತ್ನಿ ಅಶಾನ್ಯ ಮತ್ತು ಪೋಷಕರಾದ ಸಂಜಯ್ ಮತ್ತು ಸೀಮಾ ದ್ವಿವೇದಿ ಅವರನ್ನು ಭೇಟಿಯಾದರು. ಈ ವೇಳೆ ಪ್ರಧಾನಿ ಮೋದಿ ಶುಭಂ ದ್ವಿವೇದಿ ಸಾವಿಗೆ ಸಂತಾಪ ಸೂಚಿಸಿದ್ದು. ಉಗ್ರರು ಹೇಡಿತನದ ದಾಳಿ ನಡೆಸಿದ್ದಾರೆ, “ಇದು ಆರಂಭ ಮಾತ್ರ; ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಮುಂದುವರಿಯುತ್ತದೆ” ಎಂದು ಅವರು ಕುಟುಂಬಕ್ಕೆ ಭರವಸೆ ನೀಡಿದರು. ಇದನ್ನೂ ಓದಿ :ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋದು ಸುಳ್ಳು; ಕಮಲ್ ಹಾಸನ್ ವಿರುದ್ದ ಚೇತನ್ ಅಹಿಂಸಾ ವಾಗ್ದಾಳಿ
ದುರಂತದ ಬಗ್ಗೆ ಮಾತನಾಡುತ್ತ ಮೋದಿ ಭಾವುಕ..!
ಪ್ರಧಾನಿ ಮೋದಿ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶಾನ್ಯಾ ದ್ವಿವೇದಿ ಆಪರೇಷನ್ ಸಿಂಧೂರ್ ಜೊತೆ ನಮಗೆ ವೈಯಕ್ತಿಕವಾಗಿ ಸಂಬಂಧವಿದೆ ಅನಿಸುತ್ತಿದೆ, ‘ಪ್ರಧಾನಿ ನರೇಂದ್ರ ಮೋದಿ ನಮ್ಮ ಕುಟುಂಬ ಸದಸ್ಯರಂತೆ ಮಾತನಾಡಿದರು. ದುರಂತದ ಬಗ್ಗೆ ಮಾತನಾಡುವಾಗ ಅವರು ಭಾವುಕರಾದರು ಎಂದು ಹೇಳಿದರು. ಹಾಗೂ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿರುವ ಆಪರೇಷನ್ ಸಿಂಧೂರ್ ಬಗ್ಗೆ ಮೋದಿ ಚರ್ಚಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ :ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ; ಮತ್ತೆ ಉದ್ದಟತನದ ಹೇಳಿಕೆ ನೀಡಿದ ನಟ ಕಮಲ್ ಹಾಸನ್
ಪ್ರಧಾನಿ ಮೋದಿ ಕಾನ್ಪುರದ ಮೆಟ್ರೋದ ಚುನ್ನಿಗಂಜ್ನಿಂದ ಕಾನ್ಪುರ್ ಸೆಂಟ್ರಲ್ ಮಾರ್ಗ ಮತ್ತು ಜಿಟಿ ರಸ್ತೆಯಲ್ಲಿ ರಸ್ತೆ ವಿಸ್ತರನೆ ಸೇರಿದಂತೆ ಅನೇಕ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು.