ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ, ಕಾರೊಂದು ಹೊಂಡಕ್ಕೆ ಬಿದ್ದಿದ್ದು. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ, ಬಟ್ಲಹಳ್ಳಿ ಸಮೀಪ ಘಟನೆ ನಡೆದಿದ್ದು. ಕಳೆದ ರಾತ್ರಿ ಸುಮಾರು 11:30ರ ಸಮಯದಲ್ಲಿ ಘಟನೆ ನಡೆದಿದೆ. ಯನಮಲಪಾಡಿಯಿಂದ ಬಟ್ಲಹಳ್ಳಿ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಹೊಂಡಕ್ಕೆ ಬಿದ್ದಿದ್ದು. ಚಾಲಕನ ಅತಿವೇಗ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ :ಹಿಂದೂ ಮುಖಂಡರಿಗೆ ಜೈಷ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ; ತಲೆ ಕಡಿಯುವುದಾಗಿ ಬೆದರಿಕೆ
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟಿದ್ದು. ನಾಲ್ವರು ಅಪಯಾದಿಂದ ಪಾರಾಗಿದ್ದಾರೆ. ಮೃತ ವ್ಯಕ್ತಿಯನ್ನು ಕೋಲಾರ ಜಿಲ್ಲೆ ಶ್ರಿನಿವಾಸಪುರ ತಾಲ್ಲೂಕು ಗೌನಿಪಲ್ಲಿ ಮೂಲದ ಸೋಗಿಲವಾರಪಲ್ಲಿ ಗ್ರಾಮದ ಆದರ್ಶ (21) ಎಂದು ಗುರುತಿಸಲಾಗಿದ್ದು. ಘಟನಾ ಸ್ಥಳಕ್ಕೆ ಬಟ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.