Thursday, August 21, 2025
Google search engine
HomeUncategorized'ತಂದೆ ಸಮಾನರಾದ ಅಂಬಿ ಅಪ್ಪಾಜಿ ಎಂದಿಗೂ ಜೀವಂತ'; ರೆಬಲ್​ ಸ್ಟಾರ್ ನೆನೆದು ದರ್ಶನ್​ ಟ್ವಿಟ್

‘ತಂದೆ ಸಮಾನರಾದ ಅಂಬಿ ಅಪ್ಪಾಜಿ ಎಂದಿಗೂ ಜೀವಂತ’; ರೆಬಲ್​ ಸ್ಟಾರ್ ನೆನೆದು ದರ್ಶನ್​ ಟ್ವಿಟ್

ರೆಬೆಲ್ ಸ್ಟಾರ್ ಅಂಬರೀಶ್ ಅವರು ಹುಟ್ಟಿದ ಹಬ್ಬ ಹಿನ್ನಲೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳುತ್ತಿದ್ದು. ಈ ವೇಳೆ ನಟ ದರ್ಶನ್ ಕೂಡಾ ಅಂಬಿ ಅಪ್ಪಾಜಿಗೆ ವಿಶ್ ಮಾಡಿದ್ದಾರೆ. ‘ತಂದೆ ಸಮಾನರಾದ ಅಂಬಿ ಅಪ್ಪಾಜಿ ಎಂದಿಗೂ ನಮ್ಮ ಮನಸ್ಸಿನಲ್ಲಿದ್ದಾರೆ ಎಂದು ಟ್ವಿಟ್​ ಮಾಡಿದ್ದಾರೆ.

ನಟ ದರ್ಶನ್​, ಅಂಬರೀಶ್​ ಕುಟುಂಬದೊಂದಿಗೆ ಸಾಕಷ್ಟು ಆತ್ಮೀಯತೆಯನ್ನ ಕಾಯ್ದುಕೊಂಡಿದ್ದರು. ಅಂಬರೀಶ್​ ಕೂಡ ದರ್ಶನ್​ರನ್ನು ಸ್ವಂತ ಮಗನಂತೆ ಕಾಣುತ್ತಿದ್ದರು. ಅಂಬರೀಶ್ ಮರಣದ ನಂತರವೂ ದರ್ಶನ್​ ಅವರ ಕುಟುಂಬದೊಂದಿಗೆ ಆತ್ಮೀಯವಾಗಿಯೇ ಇದ್ದರು. ಆದರೆ ನಟ ದರ್ಶನ್​ ಜೈಲಿಗೆ ಹೋಗಿ ಬಂದ ನಂತರ ಸುಮಲತಾ ಮತ್ತು ಅಂಬರೀಶ್ ಅವರ ನಡುವೆ ಭಿನ್ನಭಿಪ್ರಾಯ ಮೂಡಿದೆ. ಇದನ್ನೂ ಓದಿ :ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಲಿಗಳ ಕಾಟ; ಬಾಳೆಹಣ್ಣು ತಿನ್ನುವ ವಿಡಿಯೋ ವೈರಲ್

ಇದರ ನಡುವೆ ನಟ ದರ್ಶನ್​ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿರುವ ನಟ ದರ್ಶನ್, ‘ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್ ಸ್ಟಾರ್’ ಎಂದಿದ್ದಾರೆ ನಟ ದರ್ಶನ್.

ಇದನ್ನೂ ಓದಿ :ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 36 ಹಸುಗಳ ರಕ್ಷಣೆ

ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ ಎಂದು ಟ್ವಿಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments