Thursday, May 29, 2025

U16 ಡೇವಿಸ್ ಕಪ್‌ನಲ್ಲಿ ಭಾರತದ ಆಟಗಾರನೊಂದಿಗೆ ಪಾಕಿಗಳ ಆಕ್ರಮಣಕಾರಿ ವರ್ತನೆ; ನೆಟ್ಟಿಗರಿಂದ ಆಕ್ರೋಶ

ಕಜಕಿಸ್ತಾನ್ : ಇತ್ತೀಚೆಗೆ ನಡೆದ U16 ಡೇವಿಸ್ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ್ದು. ಪಂದ್ಯದ ಕೊನೆಯಲ್ಲಿ ಪಾಕಿಸ್ತಾನದ ಆಟಗಾರ ಭಾರತೀಯ ಆಟಗಾರನ ಕಡೆಗೆ ಆಕ್ರಮಣಕಾರಿಯಾಗಿ ವರ್ತಿಸಿರುವು ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ.

ಶನಿವಾರ(ಏ.24) ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯಾ-ಓಷಿಯಾನಿಯಾ ಜೂನಿಯರ್ ಡೇವಿಸ್ ಕಪ್ (U-16) ಟೂರ್ನಮೆಂಟ್‌ನ 11ನೇ ಸ್ಥಾನಕ್ಕಾಗಿ ನಡೆದ ಪ್ಲೇಆಫ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸಿತು. ಪ್ರಕಾಶ್ ಸರ್ರನ್ ಮತ್ತು ತವಿಶ್ ಪಹ್ವಾ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ನೇರ ಸೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತದ ಅಂತಿಮ ಅಂಕಪಟ್ಟಿಯಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಂಡರು. ಇದನ್ನೂ ಓದಿ :ಸಂಭಾವನೆ ಇಲ್ಲದೆ ಅರಣ್ಯ ಇಲಾಖೆ ರಾಯಭಾರಿಯಾದ ಅನಿಲ್​ ಕುಂಬ್ಳೆ; ಕನ್ನಡಿಗರಿಂದ ಮೆಚ್ಚುಗೆ

ಆದರೆ ಆಟದ ಕೊನೆಯಲ್ಲಿ ಭಾರತೀಯ ಆಟಗಾರ ಕ್ರೀಡಾಮನೋಭಾವದಿಂದ ಕೈ ಕುಲುಕಲು ಮುಂದಾಗಿದ್ದಾರೆ. ಈ ವೇಳೆ ಪಾಕ್​ ಆಟಗಾರ ಕ್ರೀಡಾ ಮನೋಭಾವವಿಲ್ಲದೆ ಆಕ್ರಮಣಕಾರಿಯಾಗಿ ವರ್ತಿಸಿದ್ದು. ಅಗೌರವದ ರೀತಿಯಲ್ಲಿ ವರ್ತಿಸಿದ್ದಾನೆ. ಆದರೆ ಇದನ್ನು ಭಾರತೀಯ ಆಟಗಾರ ನಿರ್ಲಕ್ಷಿಸಿದ್ದು. ಯಾವುದೇ ಪ್ರತಿಕ್ರಿಯೆ ನೀಡದೆ, ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ.

ಘಟನೆ ನಡೆದ ಮೂರು ದಿನಗಳ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು. ನೆಟ್ಟಿಗರು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ :ಮಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು; ಓರ್ವ ಸಾ*ವು, ಮತ್ತೊಬ್ಬನ ಸ್ಥಿತಿ ಗಂಭೀರ

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು,  ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಗೆ ಸಂಬಂಧಿಸಿದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್​ ಸಿಂಧೂರ್​ ಮೂಲಕ ನಿಖರವಾದ ದಾಳಿ ನಡೆಸಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತು. ಇದಾದ ನಂತರ ಭಾರತ ಮತ್ತು ಪಾಕ್​ ಗಡಿಯಲ್ಲಿ ಉದ್ವಘ್ನತೆ ಹೆಚ್ಚಾಗಿತ್ತು. ಇದನ್ನೂ ಓದಿ :ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಕನ್ನಡದ ಖ್ಯಾತ ನಟ ಅನಂತ್​ ನಾಗ್​

RELATED ARTICLES

Related Articles

TRENDING ARTICLES