Thursday, May 29, 2025

‘ನಮ್ಮಪ್ಪಂದೆ ಕಾರು, ಏನ್​ ಕಿತ್ಕೋತೀಯಾ’; ಅಪ್ಪನ ದುಡ್ಡಲ್ಲಿ ಯುವಕನ ಹುಚ್ಚಾಟ

ಬೆಂಗಳೂರು : ದುಡ್ಡಿನ ಮದದಲ್ಲಿ ಯುವಕನೊಬ್ಬ ಸಾರ್ವಜನಿಕರಿಗೆ ಕಿರಿಕಿರಿ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ‘ಪ್ರಶ್ನಿಸಿದ ಸಾರ್ವಜನಿಕರಿಗೆ ನಮ್ಮಪ್ಪಂದು ಕಾರು, ಏನ್​ ಕಿತ್ಕೋತಿಯಾ ಎಂದು ದುರಹಂಕಾರ ಮೆರೆದಿದ್ದಾನೆ. ಇದನ್ನೂ ಓದಿ :U16 ಡೇವಿಸ್ ಕಪ್‌ನಲ್ಲಿ ಭಾರತದ ಆಟಗಾರನೊಂದಿಗೆ ಪಾಕಿಗಳ ಆಕ್ರಮಣಕಾರಿ ವರ್ತನೆ; ನೆಟ್ಟಿಗರಿಂದ ಆಕ್ರೋಶ

ರಾಜಾಜಿನಗರ ಮೆಟ್ರೊ ‌ಸ್ಟೇಷನ್ ಬಳಿ ಯುವಕ ಹುಚ್ಚಾಟ ಮೆರೆದಿದ್ದು. ಈ ಯುವಕ ಎಸ್​ಯುವಿ 700 ಕಾರನ್ನು ಅಜಾಗರೂಕತೆಯಿಂದ, ವೇಗವಾಗಿ ಚಲಾಯಿಸಿದ್ದು. ಅನಗತ್ಯವಾಗಿ ಹಾರ್ನ್​ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾನೆ. ಅಷ್ಟೇ ಅಲ್ಲದೇ ಯುವಕನ ಹುಚ್ಚಾಟಕ್ಕೆ ಅಪಘಾತ ಸಂಭವಿಸಿದ್ದು. ಒಂದು ದ್ವಿಚಕ್ರ ವಾಹನ ಮತ್ತು ಒಂದು ಕಾರು ಜಖಂಗೊಂಡಿವೆ. ಇದನ್ನೂ ಓದಿ :ಸಂಭಾವನೆ ಇಲ್ಲದೆ ಅರಣ್ಯ ಇಲಾಖೆ ರಾಯಭಾರಿಯಾದ ಅನಿಲ್​ ಕುಂಬ್ಳೆ; ಕನ್ನಡಿಗರಿಂದ ಮೆಚ್ಚುಗೆ

ಇದನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಯುವಕ ಅಹಂಕಾರದ ಮಾತುಗಳನ್ನ ಆಡಿದ್ದು. “ನಮ್ಮಪ್ಪಂದೆ ಕಾರು, ನನ್ ಅತ್ರ ಇನ್ನು 5 ಕಾರ್ ಇದೆ, ಏನ್ ಕಿತ್ಕೊಂತೀಯ ? ಎಂದು ಅವಾಚ್ಯವಾಗಿ ನಿಂದಿಸಿದ್ದಾನೆ. ಘಟನೆ ಸಂಬಂಧ ಇನ್ನಷ್ಟೇ ದೂರು ದಾಖಲಾಗಬೇಕಿದ್ದು. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ದೊರಕಬೇಕಿದೆ.

RELATED ARTICLES

Related Articles

TRENDING ARTICLES